Sunday, November 24, 2024
ಶಿಕ್ಷಣಸುದ್ದಿ

ಅಂಬಿಕಾ ಮಹಾವಿದ್ಯಾಲಯದ ನೂತನಪ್ರಾಂಶುಪಾಲರಾಗಿ ಡಾ. ವಿದ್ವಾನ್ ವಿನಾಯಕ ಭಟ್ಟ ಗಾಳಿಮನೆ ಆಯ್ಕೆ- ಕಹಳೆ ನ್ಯೂಸ್

ದೇಶದಲ್ಲೇ ಪ್ರಪ್ರಥಮ ಬಾರಿಗೆ ವಿಜ್ಞಾನ ವಿಷಯದಲ್ಲಿ ತತ್ವಶಾಸ್ತ್ರವನ್ನು ಅಳವಡಿಸಿಕೊಂಡ ಹೆಗ್ಗಳಿಕೆ ಗಳಿಸಿರುವ ಅಂಬಿಕಾ ಮಹಾವಿದ್ಯಾಲಯದ ನೂತನ ಪ್ರಾಂಶುಪಾಲರಾಗಿ ಡಾ. ವಿದ್ವಾನ್|| ವಿನಾಯಕ ಭಟ್ಟ ಗಾಳಿಮನೆಯವರು ಆಯ್ಕೆಗೊಂಡಿರುತ್ತಾರೆ ಎಂದುಕಾಲೇಜಿನ ಪ್ರಕಟನೆ ತಿಳಿಸಿದೆ.

ಶ್ರೀಯುತರು ಶ್ರೀಮನ್ಮಹಾರಾಜ ಸಂಸ್ಕೃತ ಕಾಲೇಜು, ಮೈಸೂರು ಇಲ್ಲಿ ತರ್ಕಶಾಸ್ತ್ರದ ಅಧ್ಯಯನವನ್ನು ನಡೆಸಿ 2006ರಲ್ಲಿ ತರ್ಕಶಾಸ್ತ್ರದಲ್ಲಿ ವಿದ್ವತ್ ಪದವಿ ಪಡೆದುಕೊಂಡಿರುತ್ತಾರೆ. ಕೆನರಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಜಿ.ಎನ್.ಭಟ್ ಇವರ ಮಾರ್ಗದರ್ಶನದಲ್ಲಿ ಭಾರತೀಯ ತತ್ವಶಾಸ್ತ್ರದ ಸಾರವಾಗಿರುವ ‘ಭಗವದ್ಗೀತೆ ಮತ್ತು ಮನೋನಿರ್ವಹಣೆ’ ಎಂಬ ವಿಷಯದಲ್ಲಿ ಮಹಾಪ್ರಬಂಧವನ್ನು ರಚಿಸಿ 2019ರಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯದಿಂದ ಪಿಎಚ್.ಡಿ. ಪದವಿಯನ್ನುಗಳಿಸಿರುತ್ತಾರೆ. ಕಾಲೇಜು ಉಪನ್ಯಾಸಕ ವೃತ್ತಿಗೆ ಅಪೇಕ್ಷಿತವಾದ ಸೆಟ್ (SET) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಸುಮಾರು 14 ವರ್ಷಗಳ ಬೋಧನಾನುಭವ ಇರುವಂತಹ ಶ್ರೀಯುತರು 2009ರಿಂದ 2020ರ ವರೆಗೆ ಆಳ್ವಾಸ್ ಕಾಲೇಜಿನ ಸಂಸ್ಕೃತ  ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಣೆಮಾಡಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಷ್ಟ್ರ ಮಟ್ಟ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸಂಸ್ಕೃತ ಸೆಮಿನಾರ್‍ಗಳಲ್ಲಿ ಸಂಶೋಧನಾ ಪ್ರಬಂಧ ಮಂಡನೆಯನ್ನು ಮಾಡಿ, ಉತ್ತಮ ಪ್ರಬಂಧ ಮಂಡನೆಗೆ 3 ಪ್ರಶಸ್ತಿಗಳನ್ನು ಗಳಿಸಿಕೊಂಡಿರುತ್ತಾರೆ. ರಾಮಾಯಣ ಹಾಗೂ ಮಹಾಭಾರತ ಕುರಿತು ದಕ್ಷಿಣೋತ್ತರ ಕನ್ನಡ ಜಿಲ್ಲೆಗಳಲ್ಲಿ 50ಕ್ಕೂ ಹೆಚ್ಚು ಧಾರ್ಮಿಕ ಉಪನ್ಯಾಸವನ್ನು ನೀಡಿರುತ್ತಾರೆ. ತರ್ಕ- ವೇದಾಂತ-ಸಾಂಖ್ಯ-ಯೋಗ ಈ ದರ್ಶನಗಳಲ್ಲಿ, ಅಲಂಕಾರಶಾಸ್ತ್ರದಲ್ಲಿ ರಾಜ್ಯಸ್ತರದ ಸ್ಪರ್ಧೆಗಳಲ್ಲಿ50ಕ್ಕೂ ಹೆಚ್ಚು ಬಹುಮಾನಗಳನ್ನು ಗಳಿಸಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು