Sunday, January 19, 2025
ಸುದ್ದಿ

ವಿಟ್ಲದಲ್ಲಿ ಉರುಳಿತು ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ! ಅಮಾನವೀಯ ಸ್ಥಿತಿಯಲ್ಲಿ ಗೋವುಗಳ ಮಾರಣಹೋಮ – ಕಹಳೆ ನ್ಯೂಸ್

ವಿಟ್ಲ : ಕೇರಳಕ್ಕೆ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನ ಉರುಳಿಬಿದ್ದು ಎರಡು ಜಾನುವಾರು ಸ್ಥಳದಲ್ಲೇ ಮೃತಪಟ್ಟ ಘಟನೆ ವಿಟ್ಲದ ಪೆರುವಾಯಿ ಗ್ರಾಮದಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಾಲ್ಕು ದನ ಹಾಗೂ ಪಿಕಪ್ ವಾಹನವನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೆರುವಾಯಿ ರಸ್ತೆ ಮೂಲಕ ಕೇರಳಕ್ಕೆ ಪಿಕಪ್ ವಾಹನದಲ್ಲಿ ಏಳು ದನಗಳನ್ನು ಕೊಂಡೊಯ್ಯಲಾಗುತ್ತಿತ್ತು. ಪೆರುವಾಯಿಯ ಕೆದುವಾರು ಎಂಬಲ್ಲಿ ಚಾಲಕನ ನಿಯಂತ್ರಣ ಕಳೆದು ಪಿಕಪ್ ರಸ್ತೆಗೆ ಉರುಳಿದೆ. ಈ ಬಗ್ಗೆ ಸ್ಥಳೀಯರು ವಿಟ್ಲ ಪೊಲೀಸರಿಗೆ ಮಾಹಿತಿ ನೀಡುವಷ್ಟರಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ. ಇವುಗಳಲ್ಲಿ ಎರಡು ಜಾನುವಾರು ಸಾವನ್ನಪ್ಪಿದ್ದು , ಇನ್ನೊಂದು ದನ, ವಾಹನ ಉರುಳಿದ ರಭಸಕ್ಕೆ ಗಾಬರಿಯಾಗಿ ತಪ್ಪಿಸಿಕೊಂಡು ಓಡಿದೆ. ಇನ್ನುಳಿದ 4 ದನಗಳನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದು ಗೋ ಶಾಲೆಗೆ ಹಸ್ತಾಂತರ ಮಾಡಿ, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವರದಿ : ಕಹಳೆ ನ್ಯೂಸ್