Recent Posts

Sunday, January 19, 2025
ಸುದ್ದಿ

ಕಲ್ಲಡ್ಕ ಶ್ರೀರಾಮ ಪದವಿ ಪೂರ್ವ ವಿದ್ಯಾಲಯ 2019-20ನೇ ಸಾಲಿನ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯ – 93% ಫಲಿತಾಂಶ -ಕಹಳೆ ನ್ಯೂಸ್

2019-20ನೇ ಸಾಲಿನ ದ್ವಿತೀಯ ಪಿ.ಯು.ಸಿಯ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಈ ಪೈಕಿ ಕಲ್ಲಡ್ಕ ಶ್ರೀರಾಮ ಪದವಿ ಪೂರ್ವ ವಿದ್ಯಾಲಯದ 303 ವಿದ್ಯಾರ್ಥಿಗಳ ಪೈಕಿ 282 ವಿದ್ಯಾರ್ಥಿಗಳು ತೇರ್ಗಡೆಗೊಂಡು 47 ವಿಶಿಷ್ಟ ಶ್ರೇಣಿ,179 ಪ್ರಥಮ ಶ್ರೇಣಿ ಪಡೆದು 93% ಫಲಿತಾಂಶ ಸಾಧಿಸಿದೆ. ವಿಜ್ಞಾನ ವಿಭಾಗದಲ್ಲಿ ಸೌಮ್ಯ 571, ವಾಣಿಜ್ಯ ವಿಭಾಗದಲ್ಲಿ ನವ್ಯ 571, ಕಲಾ ವಿಭಾಗದಲ್ಲಿ ಭಾಗೇಶ್ 517 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾರೆ.


ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ 205 ವಿದ್ಯಾರ್ಥಿಗಳ ಪೈಕಿ 35 ಅತ್ಯುನ್ನತ ಶ್ರೇಣಿ, 124 ಪ್ರಥಮ ಶ್ರೇಣಿ, 31 ದ್ವಿತೀಯ ಶ್ರೇಣಿ, 11 ತೃತೀಯ ಶ್ರೇಣಿ ಪಡೆಯುವುದರ ಮೂಲಕ ಶೇಕಡಾ 98% ಫಲಿತಾಂಶ ದಾಖಲಾಗಿದ್ದು, ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದ 64 ವಿದ್ಯಾರ್ಥಿಗಳ ಪೈಕಿ 11 ಅತ್ಯುನ್ನತ ಶ್ರೇಣಿ, 43 ಪ್ರಥಮ ಶ್ರೇಣಿ, 6 ದ್ವಿತೀಯ ಶ್ರೇಣಿ ಪಡೆಯುವುದರ ಮೂಲಕ ಶೇಕಡಾ 94% ಫಲಿತಾಂಶ ದಾಖಲಾಗಿದೆ. ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದ 34 ವಿದ್ಯಾರ್ಥಿಗಳ ಪೈಕಿ 1 ಅತ್ಯುನ್ನತ ಶ್ರೇಣಿ, 12 ಪ್ರಥಮ ಶ್ರೇಣಿ, 05 ದ್ವಿತೀಯ ಶ್ರೇಣಿ, 03 ತೃತೀಯ ಶ್ರೇಣಿ ಪಡೆಯುವುದರ ಮೂಲಕ ಶೇಕಡಾ 62% ಫಲಿತಾಂಶ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

 

 

ಅಲ್ಲದೇ ಅಕ್ಷಯ್ ಡಿ. ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ, ಸಂಖ್ಯಾಶಾಸ್ತ್ರದಲ್ಲಿ,ಪ್ರಣಾಮ್ ಲೆಕ್ಕಶಾಸ್ತ್ರದಲ್ಲಿ, ನಯನ, ಅರ್ಪಿತಾ ವ್ಯವಹಾರ ಅಧ್ಯಯನದಲ್ಲಿ, ಕೌಶಿಕ್, ನಿರೀಕ್ಷಾ ಸಂಖ್ಯಾಶಾಸ್ತ್ರದಲ್ಲಿ, ಕೃಷ್ಣಕಿರಣ್, ಅನುಷಾ ಅರ್ಥಶಾಸ್ತ್ರದಲ್ಲಿ 100ರಲ್ಲಿ 100 ಅಂಕ ಪಡೆದಿರುತ್ತಾರೆ. ಬಹುತೇಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ವ್ಯಾಸಂಗ ಮಾಡುತ್ತಿರುವ ಈ ಸಂಸ್ಥೆಯಲ್ಲಿ ಈ ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳನ್ನು ಹಾಗೂ ಶ್ರಮಿಸಿದ ಉಪನ್ಯಾಸಕರ ವರ್ಗದವರನ್ನು ಸಂಸ್ಥೆಯ ಆಡಳಿತ ಮಂಡಳಿ ಅಭಿನಂದಿಸಿದೆ.