Recent Posts

Sunday, January 19, 2025
ದಕ್ಷಿಣ ಕನ್ನಡಸುದ್ದಿ

Breaking News : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ದಾಖಲೆಯ 238 ಮಂದಿಗೆ ಕೊರೊನಾ ಪಾಸಿಟಿವ್ ; ಮುಂದುವರಿದ ಮರಣ ಮೃದಂಗ – ಇಂದು ಒಂದೇ ದಿನ ಆರು ಮಂದಿ ಬಲಿ..! – ಕಹಳೆ ನ್ಯೂಸ್

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿ ಕೊರೊನಾದಿಂದ ಸಾವನ್ನಪ್ಪುವವರ ಸಂಖ್ಯೆ ದಿನ‌ದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂದು ಮತ್ತೆ ಆರು ಮಂದಿ ಕೊರೊನಾಕ್ಕೆ ಜಿಲ್ಲೆಯಲ್ಲಿ ಬಲಿಯಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಒಂದೇ ದಿನ‌ ಆರು ಮಂದಿ ಕೊರೋನಾ ದಿಂದ ಬಲಿಯಾಗಿದ್ದು, ಮಂಗಳೂರಿನ ಮುಲ್ಕಿ ನಿವಾಸಿ 44 ವರ್ಷದ ವ್ಯಕ್ತಿ, ಬೆಳಗಾವಿಯ ರಾಮದುರ್ಗ ನಿವಾಸಿ 68 ವರ್ಷದ ವೃದ್ಧ, ಮಂಗಳೂರಿನ 62 ವರ್ಷದ ವೃದ್ಧ, ಮಂಗಳೂರಿನ 66 ವರ್ಷದ ವೃದ್ಧ, ಬಂಟ್ವಾಳ ದ 47 ವರ್ಷದ ಮಹಿಳೆ, ಮಂಗಳೂರಿನ 76 ವರ್ಷದ ವೃದ್ಧೆ ಕೊರೊನಾ ದಿಂದ ಬಲಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿವಿಧ ಖಾಯಿಲೆಯಿಂದ ಬಳಲುತ್ತಿದ್ದ ಸೋಂಕಿತರು
ಮಂಗಳೂರಿನ ಕೋವಿಡ್ ಆಸ್ಪತ್ರೆ ಯಲ್ಲಿ ಸಾವನ್ನಪ್ಪಿದ್ದಾರೆ. ದ.ಕ ಜಿಲ್ಲೆಯಲ್ಲಿ ಕೊರೊನಾ ಸಾವಿನ ಸಂಖ್ಯೆ 63ಕ್ಕೇರಿಕೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಂದು‌ ಜಿಲ್ಲೆಯಲ್ಲಿ 238 ಮಂದಿಗೆ ಕೊರೊನಾ ಪಾಸಿಟಿವ್ :

ಇನ್ನು ಅತ್ತ ಕಡೆ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಸೋಂಕಿತರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜಿಲ್ಲೆಯಲ್ಲಿ ಇಂದು ದಾಖಲೆಯ 238 ಮಂದಿಗೆ ಕೊರೋನಾ ಪಾಸಿಟಿವ್ ಧೃಡಪಟ್ಟಿದೆ.

ಸಂಪರ್ಕವೇ ಪತ್ತೆಯಾಗದ 32 ಮಂದಿಯಲ್ಲಿ ಕೊರೋನಾ ಪಾಸಿಟಿವ್ ಧೃಡಪಟ್ಟಿದೆ. ಪ್ರಾಥಮಿಕ ಸಂಪರ್ಕದಿಂದ 11 ಮಂದಿಗೆ ಪಾಸಿಟಿವ್. ವಿದೇಶದಿಂದ ಬಂದ 3 ಮಂದಿಗೆ ಮತ್ತು ಹೊರ ಜಿಲ್ಲೆಯಿಂದ ಬಂದ ಒಬ್ಬರಿಗೆ ಕೂಡ ಕೊರೋನಾ ಸೋಂಕು ದೃಢ ಪಟ್ಟಿದೆ. ಇನ್ನುಳಿದಂತೆ ಸೋಂಕಿನ‌ ಮೂಲ ತಿಳಿದು ಬಂದಿಲ್ಲ.

ಈ ಅಂಶಗಳನ್ನು ಗಮನಿಸಿದರೆ ಜಿಲ್ಲೆಯಲ್ಲಿ ಒಬ್ಬರಿಂದ ಒಬ್ಬರಿಗೆ ಕೊರೊನಾ ಸೊಂಕು ವೇಗವಾಗಿ ಹರಡುತ್ತಿರುವುದು ಸಾಬೀತಾಗಿದೆ..