Recent Posts

Thursday, November 21, 2024
ದಕ್ಷಿಣ ಕನ್ನಡಬಂಟ್ವಾಳಶಿಕ್ಷಣಸುದ್ದಿ

ಬಡತನ, ಅಂಗ ವೈಕಲ್ಯ ಮೀರಿ ದ್ವಿತೀಯ ಪಿಯುಸಿಯಲ್ಲಿ ಸಾಧನೆಗೈದ ಬಂಟ್ವಾಳದ ಭಾಗ್ಯಶ್ರೀ – ಕಹಳೆ ನ್ಯೂಸ್

ಬಂಟ್ವಾಳ‌‌‌, ಜು 16 : ವಿದ್ಯಾರ್ಥಿನಿಯೋರ್ವಳು ಬಡತನ, ಅಂಗವೈಕಲ್ಯವನ್ನು ಮೆಟ್ಟಿನಿಂತು ದ್ವಿತೀಯ ಪಿಯುಸಿಯಲ್ಲಿ 470 ಅಂಕ ಗಳಿಸಿ ಉತ್ತಮ ಸಾಧನೆಗೈದಿದ್ದಾಳೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ಕೇಶವ ಕುಲಾಲ್‌ ಹಾಗೂ ರಾಜೀವಿ ದಂಪತಿಯ ಪುತ್ರಿ ಭಾಗ್ಯಶ್ರೀ ಬಂಟ್ವಾಳದ ಎಸ್‌‌.ವಿ.ಎಸ್‌‌ ಕಾಲೇಜಿನಲ್ಲಿ ಕಲಿತು ದ್ವಿತೀಯ ಪಿಯುಸಿಯ ವಾಣಿಜ್ಯ ವಿಭಾಗದಲ್ಲಿ 476 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಲಿಕೆಯಲ್ಲಿ ಆಸಕ್ತಿ ಹೊಂದಿರುವ ಭಾಗ್ಯಶ್ರೀ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಲೊರೆಟ್ಟೋ ಚರ್ಚ್‌ ಶಾಲೆಯಲ್ಲಿ ಕಲಿತು ಉತ್ತಮ ಅಂಕ ಗಳಿಸಿದ್ದು, ಎಸ್ಸೆಎಸ್ಸೆಲ್ಸಿಯಲ್ಲಿ 470 ಅಂಕಗಳನ್ನು ಪಡೆದು ಉತ್ತೀರ್ಣಳಾಗಿ, ಬಂಟ್ವಾಳದ ಎಸ್‌‌.ವಿ.ಎಸ್‌‌ ಪದವಿ ಕಾಲೇಜನ್ನು ಸೇರಿ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆಗೈದಿದ್ದಾಳೆ.

ಈಕೆಯ ತಂದೆ ಕೇಶವ ಕುಲಾಲ್ ಅವರು ಕೂಡ ಅಂಗವೈಕಲ್ಯವನ್ನು ಹೊಂದಿದ್ದು, ಜೀವನಾಧಾರಕ್ಕೆ ಮನೆಯ ಪಕ್ಕ ಗೂಡಂಗಡಿ ಇಟ್ಟುಕೊಂಡಿದ್ದಾರೆ. ದಂಪತಿಗೆ ಇಬ್ಬರು ಪುತ್ರಿಯರು. ಹಿರಿಯ ಪುತ್ರಿ ದ್ವಿತೀಯ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದಾಳೆ. ಎರಡನೇ ಪುತ್ರಿ ಭಾಗ್ಯಶ್ರೀ ಅಂಗವೈಕಲ್ಯ ಬಡತನವ್ನು ಮೆಟ್ಟಿನಿಂದು ದ್ವಿತೀಯ ಪಿಯುಸಿಯಲ್ಲಿ ಸಾಧನೆಗೈದಿದ್ದಾಳೆ.

ಭಾಗ್ಯಶ್ರೀ ಅವರ ಎರಡೂ ಕಾಲುಗಳು ಬಲಹೀನವಾದ ಕಾರಣ ತಾಯಿ ರಾಜೀವಿ ಮಗಳನ್ನು ಪ್ರತಿನಿತ್ಯ ಕಾಲೇಜಿಗೆ ಎತ್ತಿಕೊಂಡೇ ಹೋಗಿ ಶಾಲೆಗೆ ಬಿಡುತ್ತಿದ್ದು, ಭಾಗ್ಯಶ್ರೀ ಅವರು ವೀಲ್‌‌‌ಚೇರ್‌‌ನಲ್ಲೇ ಕುಳಿತು ಪಾಠ ಕೇಳುವ ಭಾಗ್ಯಶ್ರೀ ಎಲ್ಲರಿಗೂ ಮಾದರಿಯಾಗಿದ್ದಾಳೆ.

ನನ್ನ 12 ವರ್ಷಗಳ ವಿದ್ಯಾಭ್ಯಾಸದಲ್ಲಿ ನನ್ನ ತಾಯಿ ಬೆನ್ನೆಲುಬಾಗಿ ನಿಂತಿದ್ದಾರೆ. ಶಾಲೆಗೆ ನನ್ನನ್ನು ಎತ್ತಿಕೊಂಡು ಕರೆದೊಯ್ಯುತ್ತಿದ್ದರು. ನನ್ನ ತಾಯಿಯ ಸಹಾಯದಿಂದ ನಾನು ಇಷ್ಟು ಕಲಿಯಲು ಸಾಧ್ಯವಾಯಿತು. ಇನ್ನು ಮನೆಯಲ್ಲಿ ಇದ್ದು ದೂರ ಶಿಕ್ಷಣದಲ್ಲಿ ಬಿ.ಕಾಂ ಕಲಿಯಬೇಕೆನ್ನುವ ಆಕಾಂಕ್ಷೆ ಹೊಂದಿದ್ದೇನೆ. ನನ್ನ ಕಲಿಕೆಗೆ ನನ್ನ ಸ್ನೇಹಿತರು ಹಾಗೂ ಉಪನ್ಯಾಸಕರು ಪ್ರೋತ್ಸಾಹಿಸಿದ್ದು, ಅವರಿಗೆ ನಾನು ಆಭಾರಿ ಎಂದು ಭಾಗ್ಯಶ್ರೀ ಹೇಳಿದ್ದಾರೆ.