Recent Posts

Thursday, November 21, 2024
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಹೆರಿಗೆಯಾದ ಮಹಿಳೆಗೆ ಕೊರೊನಾ ದೃಢ ; ಆಸ್ಪತ್ರೆ ಗೇಟ್ ಮುರಿದು ಬಾಣಂತಿ – ಮಗು ಕರೆದೊಯ್ದು ಪತಿ – ಕಹಳೆ ನ್ಯೂಸ್

ಬೆಳ್ತಂಗಡಿ, ಜು 17 ;ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಹೆರಿಗೆಯಾದ ಮಹಿಳೆಗೆ ಕೊರೊನಾ ದೃಢಪಟ್ಟಿದೆ. ಈ ವಿಷಯ ತಿಳಿಯುತ್ತಿದ್ದಂತೆ ಪತಿ ಗೇಟ್ ಬೀಗ ಮುರಿದು ಆಸ್ಪತ್ರೆ ಪ್ರವೇಶಿಸಿದ್ದು ಮಗು ಮತ್ತು ಬಾಣಂತಿಯನ್ನು ತನ್ನ ಕಾರಿನಲ್ಲಿ ಕರೆದೊಯ್ದ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.

ಇಲ್ಲಿನ 

ಜಾಹೀರಾತು
ಜಾಹೀರಾತು
ಜಾಹೀರಾತು

ನಾವೂರು ಗ್ರಾಮದ ಮಹಿಳೆ ಬುಧವಾರ ಇಲ್ಲಿ ಹೆರಿಗೆಗಾಗಿ ದಾಖಲಾಗಿದ್ದರು.ಈ ಸಂದರ್ಭ ಅವರ ಗಂಟಲದ್ರವ ಪರೀಕ್ಷೆಗೆ ತೆಗೆದುಕೊಳ್ಳಲಾಗಿತ್ತು.ಈ ನಡುವೆ ಬುಧವಾರ ರಾತ್ರಿಯೇ ಅವರಿಗೆ ಹೆರಿಗೆ ಆಗಿತ್ತು.ಗುರುವಾರ ಸಂಜೆ ಕೊರೊನಾ ಪರೀಕ್ಷೆಯ ಫಲಿತಾಂಶದ ಮಾಹಿತಿ ಸಿಕ್ಕಿತ್ತು.ಇದನ್ನು ಮಹಿಳೆ ಪತಿಗೆ ತಿಳಿಸಿದ ಕೂಡಲೇ ಅವರು ಕಾರಿನಲ್ಲಿ ಬಂದು ತಾಯಿ- ಮಗುವನ್ನು ಕರೆದೊಯ್ದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಇನ್ನೂ ಎಲ್ಲಿಗೆ ತೆರಳಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ.ಪೊಲೀಸರು ಶೋಧ ನಡೆಸುತ್ತಿದ್ದಾರೆ.