Sunday, January 19, 2025
ಕ್ರೈಮ್ದಕ್ಷಿಣ ಕನ್ನಡಪುತ್ತೂರು

ಉಪ್ಪಿನಂಗಡಿಯ‌‌ಲ್ಲಿ ತಾಯಿ ಬೈದರೆಂದು ನೇಣಿಗೆ ಕೊರಳೊಡ್ಡಿದ 10ರ ಬಾಲೆ – ಕಹಳೆ ನ್ಯೂಸ್

ಉಪ್ಪಿನಂಗಡಿ‌‌, ಜು 17 : ಬಾಲಕಿಯೋರ್ವಳು ತಾಯಿ ಬೈದರೆಂದು ನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿರೇಬಂಡಾಡಿ ಗ್ರಾಮದ ಕೇದಗೆದಡಿ ಎಂಬಲ್ಲಿ ಗುರುವಾರ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೃತಪಟ್ಟ ಬಾಲಕಿಯನ್ನು ಕೇದಗೆದಡಿ ನಿವಾಸಿ ಬಾಲಚಂದ್ರ ಎಂಬವರ ಪುತ್ರಿ ಪ್ರಿಯಾ (10) ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗುರುವಾರ ಸಂಜೆ ವೇಳೆ ತಲೆಕಟ್ಟಲು ಹೇಳಿದ್ದಕ್ಕೆ ತಾಯಿ ಬೈದರೆಂದು ಮುನಿಸಿಕೊಂಡು ಮನೆಯ ಶೌಚಾಲಯಕ್ಕೆ ತೆರಳಿದ್ದಳು. ಪ್ರಿಯಾ ಕಾಣಿಸದೇ ಇದ್ದ ಸಂದರ್ಭ ಮನೆಯವರು ಹುಡುಕಾಟ ನಡೆಸಿದಾಗ ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.

ಘಟನೆಯ ಬಗ್ಗೆ ಉಪ್ಪಿನಂಗಡಿ ಪೊಲೀಸ್‌‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.