ಮುಂಬೈ: ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ನಗರದ ಎರಡು ಕಡೆ ಕಟ್ಟಡ ಕುಸಿತದಿಂದಾಗಿ ಮೃತರ ಸಂಖ್ಯೆ 8ಕ್ಕೇರಿದೆ ಎಂದು ವರದಿಯಾಗಿದೆ.
ನಿನ್ನೆ ಮದ್ಯಾಹ್ನ ನಗರದ ಮಲಾಡ್ ನ ಅಬ್ದುಲ್ ಹಮೀದ್ ಮಾರ್ಗದ ಮಾಲ್ವಾನಿಯಲ್ಲಿ ಎರಡು ಅಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದ ಕಾರಣ ಇಬ್ಬರು ಮೃತಪಟ್ಟಿದ್ದರು.
ನಂತರ ದಕ್ಷಿಣ ಮುಂಬೈನ ಕೋಟೆ ಪ್ರದೇಶದಲ್ಲಿ 5 ಅಂತಸ್ತಿನ ಕಟ್ಟಡವೊಂದು ಕುಸಿದ ಕಾರಣ 4 ಮಂದಿ ಸಾವನ್ನಪ್ಪಿದ್ದರು. ನಿನ್ನೆಯಿಂದಲೇ ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದ್ದು, ಇಂದು ಅವಶೇಷದಡಿಯಿಂದ 2 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಸಂಖ್ಯೆ 6ಕ್ಕೆ ತಲುಪಿದೆ. ಹಾಗೆಯೆ ಕಾರ್ಯಾಚರಣೆಯಲ್ಲಿ 23 ಮಂದಿಯನ್ನು ರಕ್ಷಿಸಲಾಗಿದೆ.
ಎರಡು ಪ್ರತ್ಯೇಕ ಪ್ರಕರಣಗಳಿಂದ ಮೃತರ ಸಂಖ್ಯೆ 8ಕ್ಕೇರಿದೆ.