Friday, September 20, 2024
ಕ್ರೈಮ್ದಕ್ಷಿಣ ಕನ್ನಡಮೂಡಬಿದಿರೆ

ಮೂಡುಬಿದಿರೆಯಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ ಮೀನು ವ್ಯಾಪಾರಿ ‘ ಬೋಲ್ಟ್ ‘ ಆಸಿಫ್..! – ಕಹಳೆ ನ್ಯೂಸ್

ಮೂಡುಬಿದಿರೆ: ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಮಾರ್ಪಾಡಿಯ ಮೀನು ವ್ಯಾಪಾರಿಯೊಬ್ಬ ಅತ್ಯಾಚಾವೆಸಗಿದ ಘಟನೆ ಮೂಡುಬಿದಿರೆಯ ಮಾರ್ಪಾಡಿಯಲ್ಲಿ ನಡೆದಿದೆ.

ಸ್ಥಳೀಯ ಮೀನು ವ್ಯಾಪಾರಿ ಆಸಿಫ್ ಬಂಧಿತ ಆರೋಪಿಯಾಗಿದ್ದು, ಈತನ ವಿರುದ್ಧ ಫೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಧಿತ ಮೀನು ವ್ಯಾಪಾರಿ ಅಸೀಫ್ , ತಾನು ವಾಸವಿದ್ದ ಪರಿಸರದಲ್ಲೇ ವಾಸ್ತವ್ಯವಿದ್ದ ತಮಿಳು ಮೂಲದ ಕೂಲಿ ಕಾರ್ಮಿಕರೊಬ್ಬರ ಅಪ್ರಾಪ್ತ ವಯಸ್ಸಿನ ಮಗಳ ಜತೆ ಈತ ಪರಿಚಯ ಮಾಡಿಕೊಂಡು ಆಕೆಯನ್ನು ಪುಸಲಾಯಿಸಿ ಮನೆ ಹತ್ತಿರದ ಗುಡ್ಡೆಯಲ್ಲಿ ಅತ್ಯಾಚಾರವೆಸಗಿದ್ದ ಎನ್ನಲಾಗಿದೆ.

ಜಾಹೀರಾತು

ಈ ಕುರಿತು ಬಾಲಕಿಯ ಹೆತ್ತವರ ದೂರಿನಂತೆ ಆರೋಪಿಯನ್ನು ಪೊಲೀಸರು ಬಂಧಿಸಿ ಫೊಕ್ಸೊ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಆರೋಪಿಗೆ ನ್ಯಾಯಾಲಯ, ನ್ಯಾಯಾಂಗ ಬಂಧನ ವಿಧಿಸಿದೆ.