ಉಡುಪಿ, ಜು.17 : ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲ್ಲೇ ಇದ್ದು ಇಂದು ಮತ್ತೆ 84 ಜನರಲ್ಲಿ ಕೊರೊನಾ ಪಾಸಿಟಿವ್ ಆಗಿದೆ. ಜಿಲ್ಲೆಯಲ್ಲಿ ಒಟ್ಟು ದಾಖಲಾದ ಸೋಂಕು ಪ್ರಕರಣಗಳು 2 ಸಾವಿರದ ಗಡಿಯತ್ತ ತಲುಪಿದ್ದು ಈವರೆಗೆ 1979 ಪ್ರಕರಣ ದಾಖಲಾಗಿದೆ.
ಇಂದು ಜಿಲ್ಲೆಯಲ್ಲಿ 393 ಕೊರೊನಾ ವರದಿಗಳು ಲಭ್ಯವಾಗಿದ್ದು ಈ ಪೈಕಿ 309 ವರದಿಯು ನೆಗೆಟಿವ್ ಆಗಿದ್ದರೆ ಉಳಿದ 84 ವರದಿ ಪಾಸಿಟಿವ್ ಆಗಿದೆ. ಇನ್ನು ಕೂಡಾ 84 ಜನರ ಕೊರೊನಾ ಪರೀಕ್ಷಾ ವರದಿ ಬರಬೇಕಾಗಿದೆ.
ಈವರೆಗೂ ಸೋಂಕಿಗೆ ಏಳು ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದು ಪ್ರಸ್ತುತ 439 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 1543 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ 23, 858 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿದ್ದು 1979 ಜನರ ವರದಿ ಪಾಸಿಟಿವ್ ಆಗಿದೆ. 21,465 ನೆಗೆಟಿವ್ ಆಗಿದೆ.