
Prime Minister Narendra Modi
ನವದೆಹಲಿ: ಭಾರತ ಸೋಲಾರ್ ಟೆಕ್ನಾಲಜಿ ಮಿಷನ್ ನ್ನು ಆರಂಭಿಸಲಿದೆ ಎಂದು ಪ್ರಧಾನಿ ನರೇಂದ್ರಮೋದಿ ರಾಷ್ಟ್ರಪತಿ ಭವನದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಸೌರ ಮೈತ್ರಿ ಸಂಸ್ಥಾಪನಾ ಸಮ್ಮೇಳನದಲ್ಲಿ ನುಡಿದರು.
ಸಮ್ಮೇಳನದಲ್ಲಿ ಮಾತನಾಡುತ್ತಾ ನಾವು ವಿಶ್ವದೆಲ್ಲೆಡೆ ಸೌರ ಕ್ರಾಂತಿಯನ್ನು ಬಯಸುತ್ತಿದ್ದೇವೆ 100 ಗಿಗಾ ವ್ಯಾಟ್ ವಿದ್ಯುತ್ ಉತ್ಪಾದನೆಯ ಗುರಿಯನ್ನು ಹೊಂದಿದ್ದೇವೆ ಇದರಿಂದ ಏಳು ಬಿಲಿಯನ್ ಜನರಿಗೆ ಉಪಯೋಗವಾಗಲಿದೆ ಜೊತೆಗೆ ಸೌರ ವಿದ್ಯುತ್ ಉತ್ಪಾದನೆಯಲ್ಲಿ ಸೂರ್ಯ ಪಾಲುದಾರ ಸೂರ್ಯ ದೇವರು ನಮ್ಮ ಜೊತೆ ಪಾಲುದಾರನಾಗಿದ್ದಾನೆ. ಎಲ್ಲರು ಒಂದಾದರೆ ದೇಶದ ಸಮಸ್ಯೆಯನ್ನು ಬಗೆಹರಿಸಬಹುದು ಎಂದು ಭಾಷಣದಲ್ಲಿ ತಿಳಿಸಿದರು.