Sunday, January 19, 2025
ಕಾಸರಗೋಡುಮಂಜೇಶ್ವರ

ಕಾಸರಗೋಡು ಜಿಲ್ಲೆಯಲ್ಲಿ ಮತ್ತೆ 32 ಮಂದಿಗೆ ಕೊರೊನಾ ಪಾಸಿಟಿವ್ – ಕಹಳೆ ನ್ಯೂಸ್

ಕಾಸರಗೋಡು, ಜು 17 : ಜಿಲ್ಲೆಯಲ್ಲಿ ಶುಕ್ರವಾರ 32 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಪೈಕಿ 24 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಚೆಂಗಳದ 12 ಮಂದಿ, ಚೆಮ್ನಾಡ್ ನ 6 ಮಂದಿ, ಮಂಜೇಶ್ವರದ 5 ಮಂದಿ, ಕುಂಬಳೆಯ ನಾಲ್ವರು, ಕಾರಡ್ಕದ ಇಬ್ಬರು, ಮೊಗ್ರಾಲ್ ಪುತ್ತೂರು, ಪಿಲಿಕ್ಕೋಡ್, ಕಾಸರಗೋಡಿನ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಐದು ಮಂದಿ ವಿದೇಶದಿಂದ, ಮೂವರು ಹೊರ ರಾಜ್ಯಗಳಿಂದ ಬಂದವರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ನಡುವೆ 12 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ 818 ಮಂದಿಗೆ ಸೋಂಕು ತಗಲಿದ್ದು, 504 ಮಂದಿ ಗುಣಮುಖರಾಗಿ ಬಿಡುಗಡೆ ಗೊಂಡಿದ್ದಾರೆ.

ಮಂಜೇಶ್ವರದ 36, 27 ಮತ್ತು 24 ವರ್ಷದ ವ್ಯಕ್ತಿಗಳು, ಮೊಗ್ರಾಲ್ ಪುತ್ತೂರಿನ 36 ವರ್ಷದ ಮಹಿಳೆ, ಕುಂಬಳೆಯ 43 ವರ್ಷದ ಮಹಿಳೆ, 36 ವರ್ಷದ ವ್ಯಕ್ತಿಗೆ ಸಂಪರ್ಕದಿಂದ ಸೋಂಕು ತಗಲಿದೆ. ಚೆಂಗಳ ಪಂಚಾಯತ್ ನ 45, 30 , 21, 38 ಮತ್ತು 30 ವರ್ಷದ ಪುರುಷರು, 34, 35 ವರ್ಷದ ಮಹಿಳೆಯರು, ಎರಡು, ಏಳು , ಮೂರು, ಐದು ವರ್ಷದ ಮಕ್ಕಳು, ಚೆಮ್ನಾಡ್ ಪಂಚಾಯತ್ ನ 28 ವರ್ಷದ ಮಹಿಳೆ ಮತ್ತು 26 ವರ್ಷದ ಪುರುಷರು, 11, 14, 5 ವರ್ಷದ ಮಕ್ಕಳು , ಕಾರಡ್ಕ ಪಂಚಾಯತ್ ನ 38 ವರ್ಷದ ಮಹಿಳೆ ಮತ್ತು 44 ವರ್ಷದ ಪುರುಷರಿಗೆ ಸಂಪರ್ಕದಿಂದ ಸೋಂಕು ತಗಲಿದೆ.

ಜಿಲ್ಲೆಯಲ್ಲಿ 6266 ಮಂದಿ ನಿಗಾದಲ್ಲಿದ್ದು, ಈ ಪೈಕಿ 839 ಮಂದಿ ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ.