Sunday, January 19, 2025
ಕ್ರೈಮ್ಸುದ್ದಿ

ಸೋಂಕಿತೆಯನ್ನು ಬಿಡದ ಕಾಮುಕರು ; ಕ್ವಾರಂಟೈನ್‌ ಕೇಂದ್ರದಲ್ಲೇ ಅತ್ಯಾಚಾರ – ಕಹಳೆ ನ್ಯೂಸ್

ಮುಂಬೈ, ಜು.18 : ಸೋಂಕಿತೆಯನ್ನು ಕೂಡಾ ಬಿಡದ ಕಾಮುಕರು ಕ್ವಾರಂಟೈನ್‌ ಕೇಂದ್ರದಲ್ಲೇ ಅತ್ಯಾಚಾರ ನಡೆಸಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿ ಅಶೋಕ್ ರಜಪೂತ್ ಅವರು, 40 ವರ್ಷದ ಮಹಿಳೆಗೆ ಕೊರೊನಾ ಸೋಂಕು ದೃಢವಾಗಿದ್ದು ಈ ಕಾರಣ ಪನ್ವೆಲ್‌ನಲ್ಲಿರುವ ಇಂಡಿಯಾ ಬುಲ್ಸ್ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು. ಅದೇ ಕೇಂದ್ರದಲ್ಲಿ ಸೋಂಕಿತರ ಸಂಪರ್ಕಕ್ಕೆ ಬಂದಿದ್ದ ಓರ್ವನನ್ನು ಇರಿಸಲಾಗಿತ್ತು. ಆತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆತನ ಕೊರೊನಾ ಪರೀಕ್ಷೆಯ ವರದಿ ಇನ್ನಷ್ಟೇ ಬರಬೇಕಾಗಿದೆ. ಈ ನಿಟ್ಟಿನಲ್ಲಿ ಆತನನ್ನು ಈವರೆಗೂ ಬಂಧಿಸಿಲ್ಲ. ಆತನನ್ನು ಈಗ ಪ್ರತ್ಯೇಕವಾಗಿರಿಸಿ ವರದಿಗಾಗಿ ಕಾಯುತ್ತಿದ್ದೇವೆ. ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.