Recent Posts

Sunday, January 19, 2025
ಸುದ್ದಿ

ಪಾಕ್ ಕಿರಿಕ್ ಮಾಡಿದರೆ ಖಡಕ್ ಉತ್ತರ ಕೊಡಿ : ಸೇನೆಗೆ ರಕ್ಷಣಾ ಸಚಿವರ ಸೂಚನೆ-ಕಹಳೆ ನ್ಯೂಸ್

ಜಮ್ಮು,ಜು.18- ಪಾಕ್‍ನ ಕುಚೋದ್ಯಕ್ಕೆ ತಕ್ಕ ಪ್ರತ್ಯುತ್ತರ ನೀಡಿ ಎಂದು ಭಾರತೀಯ ಸೇನೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಡಕ್ ಸೂಚನೆ ನೀಡಿದ್ದಾರೆ.

ಕಣಿವೆ ರಾಜ್ಯಕ್ಕೆ ಎರಡು ದಿನಗಳ ಭೇಟಿ ನೀಡಿರುವ ರಾಜನಾಥ್ ಸಿಂಗ್ ಅವರು ಹಿರಿಯ ಸೇನಾಧಿಕಾರಿಗಳೊಂದಿಗೆ ರಾಜ್ಯದ ಮತ್ತು ಗಡಿಭಾಗದ ಸುರಕ್ಷತಾ ಪರಿಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿದ ನಂತರ ಸೇನಾ ನೆಲೆಯಲ್ಲಿ ಧೈರ್ಯ ತುಂಬಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನಮ್ಮ ತಂಟೆಗೆ ಬರುವವರಿಗೆ ತಕ್ಕ ಶಾಸ್ತಿ ಮಾಡಬೇಕು. ಯಾವುದೇ ಮುಲಾಜಿಲ್ಲದೆ ನಿಮ್ಮ ಕೆಲಸ ಮಾಡಿ ಎಂದು ಸೂಚಿಸಿದ್ದಾರೆ.
ಇದೇ ವೇಳೆ ಇಂದು ಮುಂಜಾನೆ ಪವಿತ್ರ ಅಮರನಾಥ್ ಗುಹಾಂತರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಧ್ಯಾನ ಮಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರತಿಕೂಲ ಹವಾಮಾನದ ನಡುವೆಯೂ ಸಹಸ್ರಾರು ಭಕ್ತರು ಈ ಪವಿತ್ರ ಯಾತ್ರೆ ಮಾಡುತ್ತಿದ್ದಾರೆ. ಭದ್ರತೆಯನ್ನು ಹೆಚ್ಚಿಸಲಾಗಿದೆ.