Saturday, November 23, 2024
ದಕ್ಷಿಣ ಕನ್ನಡಪುತ್ತೂರುಸುದ್ದಿ

” ಶಹಬ್ಬಾಸ್ ಭಜರಂಗಿ ” – ಪುತ್ತೂರಿನ ಎರಡು ತಿಂಗಳ ಕೊರೊನಾ ಪೀಡಿತ ಮೃತ ಮಗುವಿನ ಅಂತ್ಯಸಂಸ್ಕಾರ ನೆರವೇರಿಸಿದ ಬಜರಂಗದಳ ಕಾರ್ಯಕರ್ತರು – ಕಹಳೆ ನ್ಯೂಸ್

ಮಂಗಳೂರು : ಕೋವಿಡ್ ಸೋಂಕಿನಿಂದ ಮೃತಪಟ್ಟ ಮಗುವೊಂದನ್ನ ಬಜರಂಗದಳದ ಕಾರ್ಯಕರ್ತರು ಮಂಗಳೂರಿನ‌ ಸ್ಮಶಾನವೊಂದರಲ್ಲಿ ಅಂತ್ಯ ಸಂಸ್ಕಾರ ನಡೆಸಿದ್ದಾರೆ. ಮೃತಪಟ್ಟ ಮಗು ಎರಡು ತಿಂಗಳಿನ ಹಸುಗೂಸಾಗಿದ್ದು, ಕೋವಿಡ್-19 ಸೋಂಕಿಗೆ ತುತ್ತಾಗಿ ಬಲಿಯಾಗಿದೆ. ಪುತ್ತೂರಿನ ದಂಪತಿಗಳಿಗೆ ಸೇರಿದ ಈ ಮಗುವನ್ನ ಮಂಗಳೂರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ. ಮಗುವಿನ ಪಾರ್ಥಿವ ಶರೀರವನ್ನ ಪಡೆದ ಬಜರಂಗದಳದ ಸದಸ್ಯರು ಧಾರ್ಮಿಕ ವಿಧಿ ವಿಧಾನ ನೆರವೇರಿಸಿ, ನಂದಿಗುಡ್ಡೆಯ ರುದ್ರಭೂಮಿಯಲ್ಲಿ ದಫನ ಕಾರ್ಯ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಿಜಕ್ಕೂ, ಬಜರಂಗದಳ ಸದಸ್ಯರ ಕಾರ್ಯವನ್ನು ಮೆಚ್ಚಲೇಬೇಕು, ಯಾಕಂದ್ರೆ, ಕೋವಿಡ್-19 ನಿಂದ ಸಾವನ್ನಪ್ಪಿದ ಅದೆಷ್ಟೋ ಮಂದಿಯ ಮೃತದೇಹ ಅನಾಥವಾಗಿ ಬಿದ್ದಿರೋ ವೇಳೆ, ಹಸುಗೂಸಿನ ಮೃತದೇಹವನ್ನ ಆಸ್ಪತ್ರೆಯಿಂದ ಪಡೆದು ಅಂತ್ಯಸಂಸ್ಕಾರ ನಡೆಸಿರುವುದು ನಿಜ ಧರ್ಮದ ತತ್ವವನ್ನ ಸಾರಿದಂತಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇವರ ಈ ಕಾರ್ಯ ಜಿಲ್ಲೆಯಾದ್ಯಂತ ಮೆಚ್ಚುಗೆಗೂ ಪಾತ್ರವಾಗ್ತಿದೆ.