ಉಡುಪಿಯಲ್ಲಿ ಮತ್ತೆ 109 ಮಂದಿಗೆ ಕೊರೊನಾ ಪಾಸಿಟಿವ್ ; 2088ಕ್ಕೆ ಏರಿದ ಸೋಂಕಿತರ ಸಂಖ್ಯೆ – ಕಹಳೆ ನ್ಯೂಸ್
ಉಡುಪಿ, ಜು 18 : ಜಿಲ್ಲೆಯಲ್ಲಿ ಶನಿವಾರ ಮತ್ತೆ109 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ ಶತಕ ದಾಟಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 2088ಕ್ಕೆ ಏರಿಕೆಯಾಗಿದೆ.
292 ವರದಿಯು ನೆಗೆಟಿವ್ ಆಗಿದ್ದು, ಇನ್ನು ಕೂಡಾ 537 ಜನರ ಕೊರೊನಾ ಪರೀಕ್ಷಾ ವರದಿ ಬರಬೇಕಾಗಿದೆ. ಇಂದು ಪತ್ತೆಯಾದ 109 ಕೊರೊನಾ ಪ್ರಕರಣಗಳ ಪೈಕಿ, ಉಡುಪಿ 58, ಕುಂದಾಪುರ 40, ಕಾರ್ಕಳ ತಾಲೂಕಿನಲ್ಲಿ 11 ಪಾಸಿಟಿವ್ ವರದಿಯಾಗಿದೆ.
ಪ್ರಸ್ತುತ 492 ಸಕ್ರಿಯ ಪ್ರಕರಣಗಳಿವೆ. ಇಂದು 43 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಟ್ಟು 1586 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.