Monday, November 25, 2024
ಸುದ್ದಿ

ಬಂಟ್ವಾಳ: ಲಾಕ್ ಡೌನ್ ಅವಧಿಯಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳದಿಂದ ಭತ್ತದ ಕೃಷಿಯ ಕೆಲಸಕ್ಕೆ ನಾಂದಿ ಭತ್ತ ನಾಟಿ ಮಾಡಿ ಬೆಳೆದ ಬೆಳೆಯನ್ನು ಊರಿನ ಕಡುಬಡವರಿಗೆ ನೀಡಲು ನಿರ್ಧಾರ-ಕಹಳೆ ನ್ಯೂಸ್

ಬಂಟ್ವಾಳ: ಲಾಕ್ ಡೌನ್ ಅವಧಿಯಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳದಿಂದ ಭತ್ತದ ಕೃಷಿಯ ಕೆಲಸಕ್ಕೆ ನಾಂದಿ ಭತ್ತ ನಾಟಿ ಮಾಡಿ ಬೆಳೆದ ಬೆಳೆಯನ್ನು ಊರಿನ ಕಡುಬಡವರಿಗೆ ನೀಡಲು ನಿರ್ಧಾರ.

ಬಂಟ್ವಾಳ ತಾಲೂಕಿನ ಸರಪಾಡಿಯಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಜೈ ಹನುಮಾನ್ ಶಾಖೆ ಅಜಿಲಮೊಗರು ಇದರ ಕಾರ್ಯಕರ್ತರು ಸುಮಾರು ವರ್ಷಗಳಿಂದ ಹಡೀಲು ಬಿದ್ದಿರುವ ಗದ್ದೆಯೊಂದನ್ನು ಮಾಲಕರಿಂದ ಉಚಿತವಾಗಿ ಪಡೆದು ಭತ್ತದ ಕೃಷಿ ಕಾರ್ಯ ನಡೆಸಿದೆ.
ಉಚಿತವಾಗಿ ಪಡೆದ ಗದ್ದೆಯಲ್ಲಿ ಭತ್ತದ ಕೃಷಿ ಮಾಡಿ ಫಸಲನ್ನು ಸಮಾಜದ ಬಡವರ್ಗದ ಜನರಿಗೆ ನೀಡುವ ಉದ್ದೇಶದಿಂದ ಸಂಘಟನೆ ಮುಂದಾಗಿದ್ದು, ಇವರ ಈ ಉತ್ತಮ ಕಾರ್ಯಕ್ಕೆ ಗ್ರಾಮದ ಜನರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಬಡಜನರಿಗೆ ಸಹಾಯ ಮಾಡಬೇಕು ಎಂಬ ಉತ್ತಮ ಉದ್ದೇಶವನ್ನಿಟ್ಟುಕೊಂಡು ಸಂಘಟನೆಯ ಪ್ರಮುಖರು ಸರಪಾಡಿಯಲ್ಲಿ ಅನೇಕ ವರ್ಷಗಳಿಂದ ಹಡೀಲು ಬಿದ್ದಿದ್ದ ನವೀನ್ ಶಾಂತಿ ಎಂಬವರ 4 ಮುಡಿ ಹಡೀಲು ಗದ್ದೆಯನ್ನು ಉಚಿತವಾಗಿ ಪಡೆದು ನೇಜಿ ಕೃಷಿ ಮಾಡಿದರು.
ಈ ಗದ್ದೆಯಲ್ಲಿ ಬರುವ ಅಕ್ಕಿ ಯನ್ನು  ಕಡುಬಡವರಿಗೆ ವಿತರಿಸುವುದು ಹಾಗೂ ಬೈ ಹುಲ್ಲನ್ನು ಗೋಶಾಲೆಗೆ ನಿಡುದೆಂದು ತಿರ್ಮಾನಿಸಿ ಈ ಸಂಘಟನೆ ಕೃಷಿ ಕಾರ್ಯ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಬಜರಂಗದಳದ ಪ್ರಮುಖರಾದ ಗುರುರಾಜ್ ಬಂಟ್ವಾಳ್ ,ಬಂಟ್ವಾಳ ಪ್ರಖಂಡ ಸಂಚಾಲಕ್ ಶಿವಪ್ರಸಾದ್ ತುಂಬೆ, ಪ್ರಖಂಡ ಸಹ ಸಂಚಾಲಕ್ ಸಂತೋಷ್ ಕುಲಾಲ್, ಪ್ರಗತಿಪರ ಕ್ರಿಷಿಕರಾದ ಪುರುಷೋತ್ತಮ ಪೂಜಾರಿ ಮಜಲು ಹಾಗೂ ಸ್ಥಳ ಧಾನಿಗಳು ಮತ್ತು ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.