Breaking News : ದಕ್ಷಿಣ ಕನ್ನಡ ಜಿಲ್ಲೆಯಲ್ಲಿಂದು 285 ಮಂದಿಗೆ ಕೊರೊನಾ ಪಾಸಿಟಿವ್ ; ಇಂದು ಮತ್ತೆ ಇಬ್ಬರು ಬಲಿ – ಕಹಳೆ ನ್ಯೂಸ್
ಮಂಗಳೂರು, ಜು. 19 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರವಿವಾರದಂದು 285 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಆ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3596ಕ್ಕೆ ಏರಿಕೆಯಾಗಿದೆ.
ಜಿಲ್ಲಾಡಳಿತ ನೀಡಿರುವ ವರದಿಯ ಪ್ರಕಾರ ಜಿಲ್ಲೆಯಲ್ಲಿ ಸದ್ಯ 2028 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ರವಿವಾರದಂದು 104 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದು, ಇಲ್ಲಿಯ ತನಕ ಜಿಲ್ಲೆಯಲ್ಲಿ 1491 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಂತಾಗಿದೆ.
ರವಿವಾರದಂದು ಇಬ್ಬರು ಕೊರೊನಾಗೆ ಬಲಿ:
ಇನ್ನು ರವಿವಾರದಂದು ಕೊರೊನಾ ಸೋಂಕಿಗೆ ಇಬ್ಬರು ಬಲಿಯಾಗಿದ್ದಾರೆ. ಮಂಗಳೂರು ಮೂಲದ 77 ವರ್ಷದ ಮಹಿಳೆ ಸೋಂಕಿಗೆ ಬಲಿಯಾಗಿದ್ದಾರೆ. ಅವರು ಕ್ಯಾನ್ಸರ್, ಅಸ್ತಮಾದಿಂದ ಬಳಲುತ್ತಿದ್ದ ಬಳಲುತ್ತಿದ್ದರು. ಜುಲೈ 9ರಂದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜುಲೈ 18ರಂದು ಅವರು ಮೃತಪಟ್ಟಿದ್ದರು. ಇದೀಗ ಅವರ ಕೊರೊನಾ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ.
ಇನ್ನು ಮಂಗಳೂರು ಮೂಲದ 53 ವರ್ಷದ ವ್ಯಕ್ತಿ ಸೋಂಕಿಗೆ ಬಲಿಯಾಗಿದ್ದಾರೆ. ಅವರು ಅನಿಯಂತ್ರಿತ ಡಯಾಬಿಟಿಸ್ ನಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಜುಲೈ 15ರಂದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರವಿವಾರದಂದು ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅವರ ಕೊರೊನಾ ಪರೀಕ್ಷಾ ವರದಿಯೂ ಕೂಡ ಪಾಸಿಟಿವ್ ಬಂದಿದೆ ಎಂಬುವುದಾಗಿ ಜಿಲ್ಲಾಡಳಿತ ವರದಿ ಮಾಡಿದೆ.