ನಾವು ಕೊರೊನಾ ಸಂಬಂಧಿ ಔಷಧಿ ಹಂಚುತ್ತಿಲ್ಲ; ಸುಳ್ಳು ಸುದ್ದಿ ನಂಬಬೇಡಿ ಎಂದ ಡಾ. ಗಿರಿಧರ ಕಜೆ – ಕಹಳೆ ನ್ಯೂಸ್
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯೊಂದು ಹರಿದಾಡುತ್ತಿದೆ. ಆಯುರ್ವೇದ ತಜ್ಞ ಡಾ. ಗಿರಿಧರ್ ಕಜೆ ಅವರು ಕೊರೊನಾಗೆ ಸಂಬಂಧಿಸಿದ ಔಷಧಿಯನ್ನು ಸೋಂಕಿತರಿಗೆ ವಿತರಿಸುತ್ತಿದ್ದಾರೆ..
ಸೋಂಕು ಇರುವ ವ್ಯಕ್ತಿಗಳು ಅವರಿಂದ ಔಷಧಿ ಪಡೆಯಬಹುದು ಎನ್ನುವ ಸುಳ್ಳು ಹರಿದಾಡುತ್ತಿದೆ. ಕಜೆ ಅವರ ಔಷಧಿ ಸೋಮವಾರದಿಂದ ಮನೆ ಮನೆಗೆ ತಲುಪಿಸಲಾಗುತ್ತಿದೆ ಅನ್ನೋ ಇನ್ನೊಂದು ಪೋಸ್ಟ್ ಕೂಡ ವೈರಲ್ ಆಗ್ತಿದೆ. ಆದ್ರೆ ಇವೆಲ್ಲ ಫೇಕ್ ನ್ಯೂಸ್ ಆಗಿದ್ದು ಇದನ್ನು ನಂಬದಿರಿ ಎಂದು ಸ್ವತಃ ಡಾ. ಕಜೆಯವರು ಫೇಸ್ ಬುಕ್ನಲ್ಲಿ ಸ್ಪಷ್ಟನೆ ನೀಡಿದ್ದಾರೆ.
‘ನಾವು ಕೊರೊನಾ ಸಂಬಂಧಿತ ಔಷಧಿಗಳನ್ನು ಹಂಚುತ್ತಿಲ್ಲ.. ಹಾಗೆ ಹಂಚುವುದಕ್ಕೆ ಸರ್ಕಾರದಿಂದ ನಮಗೆ ಅನುಮತಿಯೂ ಸಿಕ್ಕಿಲ್ಲ. ನಾವು ಕೇವಲ ಇಮ್ಯುನಿಟಿ ಹೆಚ್ಚಿಸುವ 3 ವಿಧಾನಗಳನ್ನಷ್ಟೇ ಹೇಳಿದ್ದೇನೆ. ಜನರು ನಾನು ಹೇಳಿರುವ 3 ವಿಧಾನಗಳನ್ನು ಪಾಲಿಸಿದರೆ ದೇಹದಲ್ಲಿ ಇಮ್ಯುನಿಟಿ ಹೆಚ್ಚುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಗಳನ್ನು ನಂಬಬೇಡಿ.
–ಡಾ. ಗಿರಿಧರ್ ಕಜೆ, ಆಯುರ್ವೇದ ತಜ್ಞ