Sunday, January 19, 2025
ಬೆಂಗಳೂರುಸಿನಿಮಾಸುದ್ದಿ

ಸರ್ಜಾ ಕುಟುಂಬದ ಮತ್ತೋರ್ವ ಸದಸ್ಯೆ‌ಗೂ ಕೊರೊನಾ ಸೋಂಕು ದೃಢ ; ಅರ್ಜುನ್‌ ಸರ್ಜಾ ಮಗಳು ನಟಿ ಐಶ್ವರ್ಯಾಗೆ ಕೊರೊನಾ ಪಾಸಿಟಿವ್‌ – ಕಹಳೆ ನ್ಯೂಸ್

ಬೆಂಗಳೂರು, ಜು. 20 : ಇತ್ತೀಚೆಗಷ್ಟೇ ಧ್ರುವ ಸರ್ಜಾ ಹಾಗೂ ಪತ್ನಿ ಪ್ರೇರಣಾಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಈಗ ಸರ್ಜಾ ಕುಟುಂಬದ ಮತ್ತೋರ್ವ ಸದಸ್ಯೆ ಅರ್ಜುನ್‌ ಸರ್ಜಾ ಮಗಳು ನಟಿ ಐಶ್ವರ್ಯಾ ಅರ್ಜುನ್‌ಗೂ ಕೂಡಾ ಕೊರೊನಾ ಸೋಂಕು ದೃಢಪಟ್ಟಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

 

ಈ ಬಗ್ಗೆ ಸ್ವತಃ ಅವರೇ ತಿಳಿಸಿದ್ದು, ನನಗೆ ಕೊರೊನಾ ಪಾಸಿಟಿವ್‌ ಇರುವುದು ತಿಳಿದು ಬಂದಿದೆ. ನಾನು ಹೋಂ ಕ್ವಾರಂಟೈನ್‌ನಲ್ಲಿದ್ದು ಮನೆಯಲ್ಲೇ ವೈದ್ಯರು ತಿಳಿಸಿರುವ ಅಗತ್ತ ಚಿಕಿತ್ಸೆಯನ್ನು ಪಡೆಯುತ್ತಿದ್ದೇನೆ. ಇತ್ತೀಚೆಗೆ ನನ್ನ ಸಂಪರ್ಕಕ್ಕೆ ಬಂದವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ. ದಯವಿಟ್ಟು ಜಾಗೃತರಾಗಿರಿ. ದಯವಿಟ್ಟು ಮಾಸ್ಕ್‌ ಧರಿಸಿ. ನಾನು ಶೀಘ್ರದಲ್ಲೇ ಗುಣಮುಖಳಾಗುತ್ತೇನೆ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾ ಅವರಿಗೂ ಕೊರೊನಾ ಸೋಂಕು ಇರುವುದು ಖಚಿತವಾಗಿತ್ತು. ಈ ಬಗ್ಗೆ ತಿಳಿಸಿದ್ದ ಧ್ರುವ ಸರ್ಜಾ ಲಕ್ಷಣಗಳು ಇದ್ದ ಕಾರಣ ಪರೀಕ್ಷೆಗೆ ಒಳಪಟ್ಟಿದ್ದು ಕೊರೊನಾ ಇರುವುದು ದೃಢಪಟ್ಟಿದೆ. ಆಸ್ಪತ್ರೆಯಲ್ಲಿದ್ದೇನೆ. ನಾವು ಬೇಗ ಗುಣಮುಖರಾಗುವ ನಂಬಿಕೆ ಇದೆ. ನಮ್ಮ ಸಂಪರ್ಕಕ್ಕೆ ಬಂದವರು ಮನೆಯಲ್ಲೇ ಇರಿ ಎಂದು ಮನವಿ ಮಾಡಿದ್ದರು.

ಸರ್ಜಾ ಕುಟುಂಬಕ್ಕೆ ಸೇರಿದ ಕನ್ನಡದ ಖ್ಯಾತ ನಟ ಚಿರಂಜೀವಿ ಸರ್ಜಾ ಇತ್ತೀಚೆಗೆ ಸಾವನ್ನಪ್ಪಿದ್ದಾರೆ.