ಕಾಸರಗೋಡು, ಜು 20 : ಜಿಲ್ಲೆಯಲ್ಲಿ ಸೋಮವಾರ 28 ಮಂದಿಗೆ ಪಾಸಿಟಿವ್ ದೃಢಪಟ್ಟಿದ್ದು, ಈ ಪೈಕಿ 11 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. ಎಂಟು ಮಂದಿ ವಿದೇಶ ಹಾಗೂ 9 ಮಂದಿ ಹೊರ ರಾಜ್ಯಗಳಿಂದ ಬಂದವರಾಗಿದ್ದಾರೆ.
ಕಾಸರಗೋಡು ನಗರಸಭಾ ವ್ಯಾಪ್ತಿಯಲ್ಲಿ ಐದು, ಬಳಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಾಲ್ಕು, ಮಂಜೇಶ್ವರ, ಕುಂಬಳೆ, ಪನತ್ತಡಿ ಮೊಗ್ರಾಲ್ ಪುತ್ತೂರು, ವರ್ಕಾಡಿಗಳಲ್ಲಿ ತಲಾ 2, ಮಂಗಲ್ಪಾಡಿ, ಮೀ0ಜ, ಕಾರಡ್ಕ, ತ್ರಿಕ್ಕರಿಪುರ, ಮಡಿಕೈ, ನೀಲೇಶ್ವರ, ಎಣ್ಮಕಜೆ, ಪಳ್ಳಿಕೆರೆ, ಪುಲ್ಲೂರು ಪೆರಿಯ, ಚೆಮ್ನಾಡ್ ತಲಾ ಒಬ್ಬರಿಗೆ ಸೋಂಕು ಪತ್ತೆಯಾಗಿದೆ.
ಸಂಪರ್ಕದಿಂದ ಮೀ0ಜದ ಒಬ್ಬರು, ತ್ರಿಕ್ಕರಿಪುರ 2, ಮಂಗಲ್ಪಾಡಿ ಒಬ್ಬರು, ಕುಂಬಳೆಯ ಒಬ್ಬರು, ಕಾಸರಗೋಡಿನ ಮೂವರು, ಪನತ್ತಡಿನ ಇಬ್ಬರು, ಮೊಗ್ರಾಲ್ ಪುತ್ತೂರಿನ ಒಬ್ಬರು, ಕಾರಡ್ಕ ಒಬ್ಬರಿಗೆ ಸಂಪರ್ಕದಿಂದ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ 5185 ಮಂದಿ ನಿಗಾದಲ್ಲಿದ್ದು, ಈ ಪೈಕಿ 865 ಮಂದಿ ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ. ಇದುವರೆಗೆ 932 ಮಂದಿಗೆ ಸೋಂಕು ತಗಳಿದ್ದು, 395 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.