Sunday, January 19, 2025
ಕ್ರೈಮ್ದಕ್ಷಿಣ ಕನ್ನಡಸುಳ್ಯ

ಸುಳ್ಯದಲ್ಲಿ 16 ವರ್ಷದ ತನ್ನ ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯ ನಡೆಸಿದ ಕಾಮುಕ, ಹೆಣ್ಣುಬಾಕ ಗೂನಡ್ಕ ಉಸ್ತಾದ್..! – ಕಹಳೆ ನ್ಯೂಸ್

ಸುಳ್ಯ, ಜು. 21  : ತನ್ನ ಅಪ್ರಾಪ್ತ ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯ ನಡೆಸಿದ ಗೂನಡ್ಕ ಮೂಲದ ಮದ್ರಸ ಅಧ್ಯಾಪಕನೋರ್ವನನ್ನು ಕೇರಳದ ನೀಲೇಶ್ವರ ಪೊಲೀಸರು ಬಂಧಿಸಿದ್ದಾರೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಗೂನಡ್ಕ ಮೂಲದವನಾದ ಈ ಉಸ್ತಾದ್‌ ಪ್ರಸ್ತುತ ಕೇರಳದ ಕಾಞಂಗಾಡ್ ಬಳಿಕ ತೈಕಡಪ್ಪುರದಲ್ಲಿ ವಾಸಿಸುತ್ತಿದ್ದು ಅಲ್ಲಿ ಮದ್ರಸ ಅಧ್ಯಾಪಕನಾಗಿದ್ದ. ಈತನಿಗೆ ಗೂನಡ್ಕದಲ್ಲಿ ಒಂದು ವಿವಾಹವಾಗಿದ್ದು ಕಾಞಂಗಾಡ್‌ನಲ್ಲಿ ಮತ್ತೊಂದು ವಿವಾಹವಾಗಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಪಿಯ 16 ವರ್ಷದ ಮಗಳು ಗರ್ಭಿಣಿಯಾದ ಸಂದರ್ಭದಲ್ಲಿ ವಿಚಾರ ಬೆಳಕಿಗೆ ಬಂದಿದ್ದು ಬಾಲಕಿ ತನ್ನ ಮಾವನ ಸಹಾಯದಲ್ಲಿ ಕಳೆದ ಹಲವು ವರ್ಷದಿಂದ ತಂದೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಾರೆ ಹಾಗೂ ಇತರರು ಕೂಡಾ ದೌರ್ಜನ್ಯ ನಡೆಸಿದ್ದಾರೆ ಎಂದು ನೀಲೇಶ್ವರ ಪೊಲೀಸರಿಗೆ ದೂರು ನೀಡಿದ್ದಾಳೆ.

ಬಾಲಕಿ ನೀಡಿದ ದೂರಿನಂತೆ ಪೊಲೀಸರು ಉಸ್ತಾದ್ ಹಾಗೂ ಪರಿಸರದ ಮೂವರು ಯುವಕರನ್ನು ಬಂಧಿಸಿದ್ದು ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯ ನಡೆಸುತ್ತಿರುವುದು ತಿಳಿದಿದ್ದರು ಸುಮ್ಮನಿದ್ದ ತಾಯಿಯ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಇನ್ನು ಈ ಉಸ್ತಾದ್ ವಿರುದ್ಧ ಈ ಹಿಂದೆಯೂ ಪೋಕ್ಸೋ ಪ್ರಕರಣ ಸಹಿತ ನಾಲ್ಕು ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿದೆ ಎಂದು ತಿಳಿದು ಬಂದಿದೆ.