ಉಡುಪಿ, ಜು. 21 : ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲ್ಲೇ ಇದ್ದು ಮಂಗಳವಾರ ಇಲ್ಲಿನ ನ್ಯಾಯಾಲಯದ ನ್ಯಾಯಾಧೀಶರಿಗೆ ಕೊರೊನಾ ಸೋಂಕು ವರದಿ ಪಾಸಿಟಿವ್ ಆಗಿದೆ.
ನ್ಯಾಯಾಧೀಶರಿಗೆ ಕೊರೊನಾ ಇರುವುದು ದೃಢಪಟ್ಟ ಕಾರಣ ಕೋರ್ಟ್ ಆವರಣವನ್ನು ಎರಡು ದಿನ ಸೀಲ್ಡೌನ್ ಮಾಡಿ ಸ್ಯಾನಿಟೈಸ್ ಮಾಡಲಿದ್ದು ಈ ನಿಟ್ಟಿನಲ್ಲಿ ಜು. 21 ಮತ್ತು 22ರಂದು ಕೋರ್ಟ್ ಸೀಲ್ಡೌನ್ ಆಗಿರಲಿದೆ ಎಂದು ತಿಳಿದು ಬಂದಿದೆ.
ಇನ್ನು ಉಡುಪಿಯಲ್ಲಿ ಸೋಮವಾರ 98 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 2321ಕ್ಕೆ ಏರಿಕೆಯಾಗಿದೆ.