Saturday, March 29, 2025
ಉಡುಪಿರಾಜ್ಯಸುದ್ದಿ

ಉಡುಪಿ ಅಷ್ಟಮಠಕ್ಕೂ ಕಾಲಿಟ್ಟ ಕೊರೊನಾ – ಪುತ್ತಿಗೆ ಶ್ರೀಗಳಿಗೆ ಕೊರೊನಾ ಪಾಸಿಟಿವ್..! ; ಶ್ರೀಗಳ ಆರೋಗ್ಯ ವೃದ್ಧಿಗೆ ಭಕ್ತರ ಹಾರೈಕೆ – ಕಹಳೆ ನ್ಯೂಸ್

ಉಡುಪಿ : ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಗಳಲ್ಲಿ ಕೊರೊನ ಪಾಸಿಟಿವ್ ದೃಢಪಟ್ಟಿದ್ದು ಅವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸುಗುಣೇಂದ್ರ ಶ್ರೀಗಳು ಕೆಲದಿನಗಳಿಂದ ಜ್ವರ, ಗಂಟಲುನೋವಿನಿಂದ ಬಳಲುತ್ತಿದ್ದು ಅವರ ಗಂಟಲ ದ್ರವ ಪರೀಕ್ಷೆಗೆ ರವಾನಿಸಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಇಂದು ಅವರ ವರದಿ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ವಾಮೀಜಿಗಳು ಇಂದಿನಿಂದ ಪಾಡಿಗಾರು ಮಠದಲ್ಲಿ ಚಾರ್ತುಮಾಸ ವ್ರತವನ್ನು ಅರಂಭಿಸಬೇಕಾಗಿತ್ತು. ಸದ್ಯ ಅವರ ಆರೋಗ್ಯ ಸದ್ಯ ಸ್ಥಿರವಾಗಿದ್ದು, ಅವರು ಶೀಘ್ರ ಗುಣಮುಖರಾಗುವಂತೆ ಭಕ್ತವೃಂದ ಪ್ರಾರ್ಥಿಸುತ್ತಿದ್ದಾರೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ