Sunday, November 24, 2024
ರಾಜ್ಯರಾಷ್ಟ್ರೀಯಸುದ್ದಿ

‘ಎನ್ -95 ಮಾಸ್ಕ್‌ ಬಳಕೆದಾರರನ್ನು ತಕ್ಷಣ ಎಚ್ಚರಿಸಿ’ – ಕೇಂದ್ರದಿಂದ ರಾಜ್ಯಗಳಿಗೆ ಸೂಚನೆ – ಕಹಳೆ ನ್ಯೂಸ್

ನವದೆಹಲಿ, ಜು. 21 : ಜನರು ಎನ್ -95 ಮಾಸ್ಕ್‌ಗಳನ್ನು ಬಳಸುವುದರ ವಿರುದ್ಧವಾಗಿ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರವು ಪತ್ರ ಬರೆದಿದ್ದು, ಇವುಗಳು ವೈರಸ್ ಹರಡುವುದನ್ನು ತಡೆಯುವುದಿಲ್ಲ ಹಾಗೂ ಅದರ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳಿಗೆ “ಹಾನಿಕಾರಕ” ಎಂದು ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಗ್ಯ ಸಚಿವಾಲಯದ ಆರೋಗ್ಯ ಸೇವೆಗಳ ಮಹಾನಿರ್ದೇಶಕರು (ಡಿಜಿಎಚ್‌ಎಸ್) ರಾಜ್ಯಗಳ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣದ ಪ್ರಧಾನ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ, ಎನ್ -95 ಮಾಸ್ಕ್‌ನ “ಅನುಚಿತ ಬಳಕೆ”ಯ ಬಗ್ಗೆ ಗಮನಿಸಲಾಗಿದೆ. ನಿಗದಿ ಪಡಿಸಿದ ಆರೋಗ್ಯ ಕಾರ್ಯಕರ್ತರನ್ನು ಹೊರತುಪಡಿಸಿ ಸಾರ್ವಜನಿಕರು ಕೂಡಾ ಈ ಮಾಸ್ಕ್‌ಗಳನ್ನು ಬಳಸುತ್ತಿದ್ದಾರೆ ಎಂದು ಹೇಳಿದ್ದು ಮನೆಯಲ್ಲೇ ರಕ್ಷಣಾತ್ಮಕ ಮಾಸ್ಕ್‌ ತಯಾರಿಕೆಯ ಬಗ್ಗೆ ಆರೋಗ್ಯ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಸಲಹೆಗಳನ್ನು ಉಲ್ಲೇಖಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಶೇಷವಾಗಿ ರಂಧ್ರ ಉಸಿರಾಟಕಾರಕಗಳನ್ನು ಅಳವಡಿಸಿರುವ ಎನ್ -95 ಮಾಸ್ಕ್ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಕೈಗೊಂಡ ಕ್ರಮಗಳಿಗೆ ವಿರುದ್ಧವಾಗಿದೆ. ಏಕೆಂದರೆ ಈ ಮಾಸ್ಕ್ ನಿಂದ ವೈರಸ್ ಹೊರಬರುವುದನ್ನು ತಡೆಯಲು ಸಾಧ್ಯವಿಲ್ಲ. ಹಾಗಾಗಿ ಈ ಮಾಸ್ಕ್‌ಗಳ ಅನುಚಿತ ಬಳಕೆಯನ್ನು ತಡೆಯಲು ಸಂಬಂಧಪಟ್ಟ ಎಲ್ಲರಿಗೂ ಸೂಚನೆ ನೀಡಬೇಕು ಎಂದು ಡಿಜಿಹೆಚ್ಎಸ್ ರಾಜೀವ್ ಗರ್ಗ್ ಪತ್ರದಲ್ಲಿ ತಿಳಿಸಿದ್ದಾರೆ.

ಏಪ್ರಿಲ್‌ನಲ್ಲಿ ಸರ್ಕಾರವು ಮನೆಯಲ್ಲಿಯೇ ಮಾಸ್ಕ್‌ ತಯಾರಿಸುವ ಬಗ್ಗೆ ಸಲಹೆಯನ್ನು ನೀಡಿತ್ತು. ಸೂಚನೆಯ ಪ್ರಕಾರ ಅದನ್ನು ಪ್ರತಿ ದಿನ ತೊಳೆದು ಮರು ಬಳಕೆ ಮಾಡಬೇಕಾಗಿದೆ. ಹಾಗೆಯೇ ಈ ಮಾಸ್ಕ್‌ಗಳನ್ನು ಯಾರೊಂದಿಗೂ ಹಂಚಿಕೊಂಡು ಬಳಸಬಾರದು ಎಂದು ತಿಳಿಸಿತ್ತು.