Sunday, January 19, 2025
ಕ್ರೈಮ್ದಕ್ಷಿಣ ಕನ್ನಡಸುಳ್ಯ

ಹಿಂದೂ ಹೆಣ್ಣು ಮಕ್ಕಳನ್ನು ಗುರಿಯಾಗಿಸಿ ಅನ್ಯಕೋಮಿನ ಸಂಸ್ಥೆಯಿಂದ ಸೌಂದರ್ಯ ಸ್ಪರ್ಧೆ – ಹಿಂದೂ ಜಾಗರಣ ವೇದಿಕೆ ಆಕ್ರೋಶ ; ಸ್ಪರ್ಧೆಗೆ ಅವಕಾಶ ನೀಡದಂತೆ ಜಿಲ್ಲಾ ಪೋಲೀಸ್ ಅಧೀಕ್ಷಕರಿಗೆ ದೂರು – ಕಹಳೆ ನ್ಯೂಸ್

ಸುಳ್ಯ : ನಗರದ ಮೊಬೈಲ್ ಗ್ಯಾರೇಜ್ ಹೆಸರಿನ ಸಂಸ್ಥೆಯೊಂದು ತನ್ನ ಫೇಸ್‌ಬುಕ್ ಪೇಜ್ ಹಾಗೂ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಫೋಟೋ ಸೌಂದರ್ಯ ಸ್ಪರ್ಧೆ ಏರ್ಪಡಿಸಿದ್ದು, ಅದರ ವಿವರಗಳನ್ನು ಒಳಗೊಂಡ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮೇಲ್ನೋಟಕ್ಕೆ ಇದೊಂದು ಹಿಂದೂ ಹೆಣ್ಣುಮಕ್ಕಳನ್ನು ಗುರಿಯಾಗಿಸಿ ಅನ್ಯಕೋಮಿನವರು ನಡೆಸುವ ಬಗ್ಗೆ ಅನುಮಾನವೆದ್ದಿದೆ.

ಸಾಮಾಜಿಕ ಜಾಲತಾಣದಲ್ಲಿ ಒಂದು ಬಾರಿ ಹಂಚಿಕೆಯಾದ ಫೋಟೋ ಗಳು ಮುಂದೆ ಅಶ್ಲೀಲ ಪೇಜ್ ಗಳಿಗೆ ಅಥವಾ ಫೇಕ್ ಖಾತೆಗಳಿಗೆ ಬಳಕೆಯಾಗುತ್ತಿರುವುದು ಎಲ್ಲರಿಗೂ ತಿಳಿದಿದ್ದು , ಅದರಲ್ಲೂ ಹಿಂದೂ ಹೆಣ್ಣು ಮಕ್ಕಳ ಸೌಂದರ್ಯ ಸ್ಪರ್ಧೆಯನ್ನು ಅನ್ಯಕೋಮಿನ ವ್ಯಕ್ತಿಯೊಬ್ಬರ ಒಡೆತನದಲ್ಲಿ ನಡೆಸಲಾಗುತ್ತಿರುವ ಮೊಬೈಲ್ ಅಂಗಡಿಯ ಹೆಸರಿನಲ್ಲಿ ನಡೆಸುತ್ತಿದ್ದು, ಹಿಂದೂ ಹೆಣ್ಣು ಮಕ್ಕಳ ಫೋಟೋ ದುರ್ಬಳಕೆ ಆಗುವ ಸಾಧ್ಯತೆ ಹೆಚ್ಚಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅನ್ಯಕೋಮಿನವರಿಂದ ಮುಂದಾಗಬಹುದಾದ ಅನಾಹುತಗಳ ಬಗ್ಗೆ ಅನುಮಾನಗಳಿದ್ದು, ಈ ಹಿನ್ನೆಲೆಯಲ್ಲಿ ಸ್ಪರ್ಧೆಗೆ ಅವಕಾಶ ಮಾಡಿಕೊಡದಂತೆ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಅಜಿತ್ ರೈ ಹೊಸಮನೆ ಜಿಲ್ಲಾ ಅಧೀಕ್ಷಕರಿಗೆ ದೂರು ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು