Friday, September 20, 2024
ಬೆಂಗಳೂರುರಾಜ್ಯಸುದ್ದಿ

ಕೊರೊನಾ ಟೆಸ್ಟ್ ದರ ಇಳಿಕೆ – ಪರೀಕ್ಷೆಗೆ, ಪಿಪಿಇ ಕಿಟ್‌‌ಗೆ ದರ ವಿಧಿಸುವಂತಿಲ್ಲ ; ರಾಜ್ಯ ಸರ್ಕಾರದಿಂದ ಮಹತ್ವದ ಘೋಷಣೆ

ಬೆಂಗಳೂರು, ಜು 21 : ಖಾಸಗಿ ಆಸ್ಪತ್ರೆಯಲ್ಲಿ ಈ ಹಿಂದೆ ಕೊರೊನಾ ಪರೀಕ್ಷೆಗಾಗಿ 4500 ರೂ. ಶುಲ್ಕ ಪಡೆದುಕೊಳ್ಳುತ್ತಿದ್ದರು. ಆದರೆ, ಅದನ್ನು ಈಗ 3 ಸಾವಿರ ರೂ.ಗೆ ಇಳಿಕೆ ಮಾಡಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆಗೆ 2 ಸಾವಿರ ರೂ ನಿಗದಿ ಮಾಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್‌‌‌‌‌‌‌‌‌ ಹೇಳಿದರು.

ಕೊರೊನಾ ಟಾಸ್ಕ್‌ ಫೋರ್ಸ್‌ ನಂತರ ಮಾತನಾಡಿದ ಅವರು, ಕೊರೊನಾ ಪರೀಕ್ಷೆಯನ್ನು ಸರ್ಕಾರ ನಿಗಿದಿ ಮಾಡಿದ್ದು, ಸರ್ಕಾರ ಸೂಚಿಸಿದ ರೋಗಿಗಳಿಗೆ 2 ಸಾವಿರ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ನೇರವಾಗಿ ತೆರಳಿ ಪರೀಕ್ಷೆ ಮಾಡಿಸಿಕೊಂಡರೆ 3 ಸಾವಿರ ರೂ.ಅನ್ನು ನಿಗದಿ ಮಾಡಲಾಗಿದೆ. ಈ ಹಣದಲ್ಲೇ ಎಲ್ಲಾ ಪರೀಕ್ಷೆಗಳು ನಡೆಯಬೇಕು. ಪಿಪಿಇ ಕಿಟ್‌‌‌‌‌ ಎಂದು ಹಣ ಹಾಕಬಾರದು ಎಂದು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕೊರೊನಾ ಪರೀಕ್ಷೆಗೆಂದು ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚು ಹಣ ವಸೂಲಿ ಮಾಡುವುದು ತಿಳಿದುಬಂದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು. ಈ ರೀತಿ ಮಾಡಿದರೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಾಗುತ್ತದೆ. ಸಿಎಂ ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಹಂತ ಹಂತವಾಗಿ ಕ್ರಮ ತೆಗದುಕೊಳ್ಳುತ್ತಿದ್ಧಾರೆ ಎಂದರು.

ಜಾಹೀರಾತು

ಸರ್ಕಾರವು ಖಾಸಗಿಯವರಿಂದ ಶೇ.50 ಬೆಡ್ ಪಡೆದುಕೊಳ್ಳಲಿದ್ದು, ಉಳಿದಂತೆ ಶೇ.50ರಷ್ಟು ಬೆಡ್‍ಗಳನ್ನು ಅವರು ಯಾವುದಕ್ಕೆ ಬೇಕಾದರೂ ಉಪಯೋಗ ಮಾಡಿಕೊಳ್ಳಬಹುದು. ಆದರೆ, ಸರ್ಕಾರಕ್ಕೆಂದು ನೀಡಿರುವ ಶೇ.50ರಷ್ಟು ಬೆಡ್‌ಗಳನ್ನು ಕೊರೊನಾಕ್ಕೆ ಹೊರತುಪಡಿಸಿದರೆ ಇನ್ಯಾವುದಕ್ಕೂ ಉಪಯೋಗ ಮಾಡುವಂತಿಲ್ಲ ಎಂದು ತಿಳಿಸಿದರು.

ನಾನ್‌ ಕೊರೊನಾ ಸೇವೆಗಾಗಿ ಜಿಲ್ಲಾ ಕೆಂದ್ರದ ಖಾಸಗಿ ಆಸ್ಪತ್ರೆಗಳು ಲಭ್ಯವಿರುತ್ತದೆ. ಆಯುಷ್‌‌ ವೈದ್ಯರ ವೇತನವನ್ನು 48 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ಕೊರೊನಾ ನಿರ್ವಹಣೆ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳುವ ಎಂಬಿಬಿಎಸ್‌‌‌ ವೈದ್ಯರಿಗೂ ಕೂಡಾ 80 ಸಾವಿರ ರೂ ವೇತನವನ್ನು ನಿಗದಿ ಮಾಡಲಾಗಿದೆ ಎಂದರು.

ಆಸ್ಪತ್ರೆಗಳಲ್ಲಿ ನಾನ್‌‌ ಕೊರೊನಾ ರೋಗಿಗಳಿಗೂ ಚಿಕಿತ್ಸೆ ನೀಡಲು ನಿರ್ಧರಿಸಿದ್ದು, ಒಪಿಡಿ ದರ ಎಂದು 10 ರೂ. ಅನ್ನು ಪಾವತಿ ಮಾಡುವಂತಿಲ್ಲ. ಇದರೊಂದಿಗೆ ಆಯುಷ್‌ ಇಲಾಖೆಯಿಂದ ರೋಗಿಗಳ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಲುವಾಗಿ ಕೆಲವೊಂದು ಕ್ರಮಗಳನ್ನು ತೆಗೆದುಕೊಳ್ಳುವಂತೆ ಪ್ರಸ್ತಾವನೆ ಬಂದಿದೆ. ಉನ್ನತ ಮಟ್ಟದ ಸಮಿತಿಗೆ ಆಯುಷ್‌‌‌‌ ಇಲಾಖೆಯಿಂದ ಬಂದ ಪ್ರಸ್ತಾವನೆಯನ್ನು ನೀಡಲಾಗಿದ್ದು. ವರದಿಯನ್ನು ಮುಂದಿನ ವಾರದಲ್ಲಿ ನೀಡಲಿದೆ ಎಂದು ತಿಳಿಸಿದರು.