Sunday, January 19, 2025
ರಾಜ್ಯಸುದ್ದಿಹಾಸನ

ಹಳ್ಳಿಗಳಲ್ಲಿ ಕೊರೊನಾ ಮರಣ ಮೃದಂಗ ಭಾರಿಸಲಿದೆ ; ಭವಿಷ್ಯ ನುಡಿದ ಕೋಡಿ ಮಠದ ಸ್ವಾಮೀಜಿ – ಕಹಳೆ ನ್ಯೂಸ್

ಹಾಸನ: ಆಸ್ವೀಜ ಮಾಸ, ಕಾರ್ತಿಕ ಮಾಸದಲ್ಲಿ ಕೊರೊನಾ ಹೆಚ್ಚಾಗಲಿದ್ದು ಹಳ್ಳಿಗಳಲ್ಲಿ ಕೊರೊನಾ ಮರಣ ಮೃದಂಗ ಭಾರಿಸಲಿದೆ ಎಂದು ಕೋಡಿ ಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಕೋಡಿಮಠದಲ್ಲಿ ಮಾತನಾಡಿದ ಶ್ರೀ ಶಿವಾನಂದ ಶಿವಾಚಾರ್ಯ ರಾಜೇಂದ್ರ ಸ್ವಾಮೀಜಿ, ಹಳ್ಳಿಗಳ ಜನರು ಎಚ್ಚರದಿಂದ ಇರಬೇಕು. ಜನರು ಸರ್ಕಾರದ ನಿಯಮ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ವಚ್ಛತೆ, ಸಾಮಾಜಿಕ ಅಂತರದ ಕಡೆ ಗಮನ ಕೊಡಬೇಕು. ಇನ್ನೂ ಕೆಲ ತಿಂಗಳು ಕೊರೊನಾ ಅಟ್ಟಹಾಸ ಇರಲಿದೆ ಎಂದು ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಕೊರೊನಾ ಗಾಳಿಯಲ್ಲಿ ಸಂಚಾರ ಮಾಡೋದು ಕಡಿಮೆ ಜನರು ಸುರಕ್ಷತೆ ಕಾಪಾಡಿದರೆ ಕೊರೊನಾದಿಂದ ಪಾರಾಗಬಹುದು. ಜನರು ಭಯ, ಆತಂಕ ಬಿಟ್ಟು ಸರ್ಕಾರದ ಜೊತೆ ಕೈಜೋಡಿಸಿ ಎಂದು ಸ್ವಾಮೀಜಿ ತಿಳಿಸಿದ್ದಾರೆ.