ಜು.23ರಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಯೂಟ್ಯೂಬ್ ತರಗತಿ ಪ್ರಾರಂಭ ; ವಿದ್ಯಾರ್ಥಿಗಳಿಗೆ ಪ್ರತಿ ದಿನ 45 ನಿಮಿಷಗಳ 4 ತರಗತಿಗಳು – ಕಹಳೆ ನ್ಯೂಸ್
ಬೆಂಗಳೂರು, ಜು 22 : ಜು.23ರ ಗುರುವಾರದಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಯೂಟ್ಯೂಬ್ ಮುಖಾಂತರ ಪ್ರೀ ರೆಕಾರ್ಡೆಡ್ ವಿಡಿಯೋ ತರಗಳು ಪ್ರಾರಂಭವಾಗಲಿವೆ.
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಈ ಪಾಠವನ್ನು ಕೇಳಲು ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ಅಥವಾ ಇಂಟರ್‌ನೆಟ್ ಇರದೇ ಇದ್ದಲ್ಲಿ, ಕಾಲೇಜು ಆರಂಭವಾದ ಸಂದರ್ಭ ಇದೇ ಪಾಠಗಳನ್ನು ಉಪನ್ಯಾಸಕರು ಮತ್ತೊಮ್ಮೆ ಬೋಧನೆ ಮಾಡಲಿದ್ದಾರೆ ಎಂದು ಪಿಯು ಇಲಾಖೆ ನಿರ್ದೇಶಕಿ ಎಂ.ಕಂಗವಲ್ಲಿ ಹೇಳಿದ್ದಾರೆ.
ಕೊರೊನಾ ಸೋಂಕು ಹೆಚ್ಚಾಗಿ ವ್ಯಾಪಿಸುತ್ತಿರುವ ಹಿನ್ನೆಲೆ ಸದ್ಯಕ್ಕೆ ಕಾಲೇಜು ಪ್ರಾರಂಭವಾಗುವ ಸಾಧ್ಯತೆ ಇಲ್ಲ. ದ್ವಿತೀಯ ಪಿಯುಸಿ ತರಗತಿಗಳು ವಿದ್ಯಾರ್ಥಿ ಜೀವನದಲ್ಲಿ ಪ್ರಮುಖ ಘಟ್ಟವಾಗಿರುವ ಕಾರಣ ಈ ತೀರ್ಮಾನ ಮಾಡಲಾಗಿದ್ದು, ದ್ವಿತೀಯ ಪಿಯುಸಿ ಪಠ್ಯಕ್ರಮಗಳಿಗೆ ಸಂಬಂಧಿಸಿದಂತೆ ನೋಟ್ಸ್‌ಗಳನ್ನು ತಯಾರು ಮಾಡುವುದು ಆಯಾ ಕಾಲೇಜುಗಳ ಉಪನ್ಯಾಸಕರ ಮುಖ್ಯ ಜವಾಬ್ದಾರಿಯಾಗಿದೆ ಎಂದು ತಿಳಿಸಿದ್ದಾರೆ.
ಶಿಕ್ಷಣ ಇಲಾಖೆಯಿಂದ ಪ್ರತೀ ಕಾಲೇಜಿಗೂ ಕೆಲವು ನಿರ್ದೇಶನಗಳನ್ನು ಕೂಡಾ ನೀಡಲಾಗಿದ್ದು, ಶಿಕ್ಷಣ ಇಲಾಖೆಯ ನಿರ್ದೇಶನದಂತೆ ವಿದ್ಯಾರ್ಥಿಗಳ ವಾಟ್ಸ್‌ಆಪ್ ಗ್ರೂಪ್‌ವೊಂದನ್ನು ರಚಿಸಿ ಪಠ್ಯಕ್ರಮಗಳಿಗೆ ಸಂಬಂಧಪಟ್ಟಂತೆ ವೀಡಿಯೋಗಳನ್ನು ಮಕ್ಕಳಿಗೆ ತಲುಪಿಸುವಂತ ಕೆಲಸವನ್ನು ಪ್ರತಿ ಕಾಲೇಜಿನ ಸಂಯೋಜರು ಮಾಡಬೇಕು. ಅಲ್ಲದೇ, ದೂರಾವಣಿಯ ಮೂಲಕವೂ ಕೂಡಾ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಸಂದೇಹಗಳನ್ನು ನಿವಾರಿಸಬಹುದು. ನಿಗದಿತ ವೇಳಾಪಟ್ಟಿ ಸೇರಿದಂತೆ ನೋಟ್ಸ್ ತಯಾರಿಗಳನ್ನು ಮಾಡುವುದು ಇತ್ಯಾದಿಗಳನ್ನು ನಿರ್ದೇಶನ ನೀಡಿದೆ.
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿ ದಿನ 45 ನಿಮಿಷಗಳ 4 ತರಗತಿಗಳು ನಡೆಯಲಿವೆ.
ಸಮಯ: ಪ್ರತಿದಿನ ಬೆಳಗ್ಗೆ 9ರಿಂದ 12. ಪ್ರತಿ 45 ನಿಮಿಷಗಳಿಗೊಮ್ಮೆ ಒಂದೊಂದು ತರಗತಿ (9- 9.45, 9.45-10.30, 10.30- 11.15, 11.15ರಿಂದ 12)
ಜುಲೈ 23: ಭೌತಶಾಸ್ತ್ರ/ಅಕೌಂಟೆನ್ಸಿ ಭೌತಶಾಸ್ತ್ರ/ಅಕೌಂಟೆನ್ಸಿ (ನೋಟ್ಸ್) ರಸಾಯನಶಾಸ್ತ್ರ /ರಾಜ್ಯಶಾಸ್ತ್ರ ರಸಾಯನಶಾಸ್ತ್ರ /ರಾಜ್ಯಶಾಸ್ತ್ರ (ನೋಟ್ಸ್)
ಜುಲೈ 24: ಜೀವಶಾಸ್ತ್ರ/ಬಿಸಿನೆಸ್ ಸ್ಟಡೀಸ್ ಜೀವಶಾಸ್ತ್ರ/ ಬಿಸಿನೆಸ್ ಸ್ಟಡೀಸ್ (ನೋಟ್ಸ್) ಗಣಿತ/ಅರ್ಥಶಾಸ್ತ್ರ ಗಣಿತ/ಅರ್ಥಶಾಸ್ತ್ರ (ನೋಟ್ಸ್)
ಜುಲೈ 25: ಗಣಿತ/ಇತಿಹಾಸ ಗಣಿತ/ಇತಿಹಾಸ (ನೋಟ್ಸ್) ಜೀವಶಾಸ್ತ್ರ/ ಬಿಸಿನೆಟ್ ಸ್ಟಡೀಸ್ ನೋಟ್ಸ್
ಜುಲೈ 27: ರಸಾಯನಶಾಸ್ತ್ರ/ರಾಜ್ಯಶಾಸ್ತ್ರ ನೋಟ್ಸ್ ಕಂಪ್ಯೂಟರ್ ಸೈನ್ಸ್/ ಸಮಾಜಶಾಸ್ತ್ರ ನೋಟ್ಸ್
ಜುಲೈ 28: ಬೇಸಿಕ್ ಮ್ಯಾಥ್ಸ್/ ಸಮಾಜಶಾಸ್ತ್ರ ನೋಟ್ಸ್ ಭೌತಶಾಸ್ತ್ರ/ಅಕೌಂಟೆನ್ಸಿ ನೋಟ್ಸ್
ಜುಲೈ 29: ಇಂಗ್ಲಿಷ್ ನೋಟ್ಸ್ ಕನ್ನಡ/ಹಿಂದಿ/ಸಂಸ್ಕೃತ ನೋಟ್ಸ್
ಜು.30: ಭೌತಶಾಸ್ತ್ರ/ಅಕೌಂಟೆನ್ಸಿ ನೋಟ್ಸ್ ರಸಾಯನಶಾಸ್ತ್ರ/ರಾಜ್ಯಶಾಸ್ತ್ರ ನೋಟ್ಸ್
ಜುಲೈ 31: ಜೀವಶಾಸ್ತ್ರ/ಬಿಸಿನೆಸ್ ಸ್ಟಡೀಸ್ ನೋಟ್ಸ್ ಗಣಿತ/ಅರ್ಥಶಾಸ್ತ್ರ ನೋಟ್ಸ್
ಆಗಸ್ಟ್ 1: ಗಣಿತ/ಇತಿಹಾಸ ನೋಟ್ಸ್ ಜೀವಶಾಸ್ತ್ರ/ ಬಿಸಿನೆಟ್ ಸ್ಟಡೀಸ್ ನೋಟ್ಸ್
ಪ್ರಾಂಶುಪಾಲರು ಮತ್ತು ಉಪನ್ಯಾಸಕರು ವಿದ್ಯಾರ್ಥಿಗಳಿಗೆ https://www.youtube.com/c/dpuedkpucpa ಲಿಂಕ್ ಅನ್ನು ತಲುಪಿಸುವ ಕಾರ್ಯವನ್ನು ಮಾಡಬೇಕು ಎಂದು ಇಲಾಖೆ ಹೇಳಿದೆ.