Sunday, January 19, 2025
ಸುದ್ದಿ

ಮಾರ್ಚ್ 13 ರಂದು ಮಂಗಳೂರಿನಲ್ಲಿ ವೈದ್ಯರ ಪ್ರತಿಭಟನೆ ; ಬೆಳಗ್ಗೆಯಿಂದ ಸಂಜೆವರೆಗೆ ಸಿಗ್ಗಲ್ಲ ಡಾಕ್ಟರ್ಸ್ – ಕಹಳೆ ನ್ಯೂಸ್

ಮಂಗಳೂರು : ಕೇಂದ್ರ ಸರಕಾರವು ತರಲಿರುವ ” ನೇಷನಲ್ ಮೆಡಿಕಲ್ ಕೌನ್ಸಿಲ್ ಬಿಲ್, ವಿರುದ್ಧ ಮಂಗಳೂರಿನಲ್ಲಿ ಮಾರ್ಚ್ 13 ರಂದು ವೈದ್ಯರ ಬೃಹತ್ ಪ್ರತಿಭಟನೆ ನಡೆಯಲಿದ್ದು ಅಂದು ತುರ್ತು ಚಿಕಿತ್ಸೆ ಹೊರತು ಪಡಿಸಿ ಬೇರೆಯಾವ ವೈದ್ಯಕೀಯ ಚಿಕಿತ್ಸೆಯೂ ಲಭಿಸುವುದಿಲ್ಲ.

ಸಾರ್ವಜನಿಕ ಪ್ರಕಟಣೆ

ಈ ಬಿಲ್ ವೈದ್ಯಕೀಯ ಶಿಕ್ಷಣದ ಗುಣಮಟ್ಟಕ್ಕೆ, ಬಡವೈದ್ಯಕೀಯ ವಿದ್ಯಾರ್ಥಿಗಳಿಗೆ ವೈದ್ಯರುಗಳಿಗೆ ಮಾರಕವಾಗಿದ್ದು ; ಚಿಕಿತ್ಸಾ ವೆಚ್ಚವು ಏರಿಕೆಯಾಗಲಿದ್ದು. ಅಲೋಪಯಿಯೇತರ ವೈದ್ಯರುಗಳಿಗೆ ಕಿರು ತರಬೇತಿ ನೀಡಿ ಅವರಿಗೆ ಅಲೋಪತಿ ವಿಧಾನದಲ್ಲಿ ಚಿಕಿತ್ಸೆ ನೀಡಲು ಅನುಮತಿ ಕೊಡುವಂತಹ ವಿಚಿತ್ರ ಕಾನೂನು ಇದಾಗಿದ್ದು, ಇದರ ವಿರುದ್ಧ ವೈದ್ಯರುಗಳ ಪ್ರತಿಭಟನೆಯು ಮಂಗಳೂರಿನಲ್ಲಿ ನಡೆಯಲಿದ್ದು, ದಿನಾಂಕ 13 ರಂದು ಬೆಳಗ್ಗೆ 8.00 ರಿಂದ ಸಂಜೆ 6.00 ವರೆಗೆ ತುರ್ತು ಚಿಕಿತ್ಸೆ ಮಾತ್ರ ದೊರೆಯುತ್ತದೆ. ಹೊರ ರೋಗಿಗಳಿಗೆ ಯಾವುದೇ ಚಿಕಿತ್ಸೆ ದೊರೆಯುವುದಿಲ್ಲ ಎಂದು ವೈದ್ಯರ ಸಂಘ ಸಾರ್ವಜನಿಕ ಪ್ರಕಟನೆ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವರದಿ : ಕಹಳೆ ನ್ಯೂಸ್