Thursday, January 23, 2025
ಸುದ್ದಿ

ಬಿಜೆಪಿಗೆ ಸೇರಿ ಎಂದ ನೆಟ್ಟಿಗನಿಗೆ ಡ್ರೋನ್​ ಪ್ರತಾಪ್​ ನೀಡಿದ ಉತ್ತರ ; ನಾನು ಭವಿಷ್ಯ ಭಾರತದ ಪ್ರಧಾನಮಂತ್ರಿ ರಾಹುಲ್​ ಗಾಂಧಿಯವರ ಅಭಿಮಾನಿ..! – ಕಹಳೆ ನ್ಯೂಸ್

ಬೆಂಗಳೂರು: ಡ್ರೋನ್​ ತಯಾರಿಸಿದ್ದೇನೆಂದು ಕಾಗೆ ಹಾರಿಸಿ ಜನರ ನಂಬಿಕೆಯನ್ನು ಹುಸಿ ಮಾಡಿದ ಡ್ರೋನ್​ ಪ್ರತಾಪ್​ ತೀವ್ರ ಟೀಕೆಗೆ ಗುರಿಯಾಗುತ್ತಲೇ ಇದ್ದಾರೆ.

ಇವೆಲ್ಲದರ ನಡುವೆ ಅವರ ವಿರುದ್ಧ ದೂರು ದಾಖಲಾಗಿ, ಮೈಸೂರಿನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಸುದ್ದಿಯು ಹರಿದಾಡಿತ್ತು. ಇದರ ಬೆನ್ನಲ್ಲೇ ಟ್ವಿಟರ್​ನಲ್ಲಿ ಪ್ರತ್ಯಕ್ಷವಾಗಿರುವ ಪ್ರತಾಪ್​, ನೆಟ್ಟಿಗರ ಪ್ರಶ್ನೆಗೆ ಉತ್ತರಿಸುವ ಮೂಲಕ ಸಾರ್ವಜನಿಕ ಸಂಪರ್ಕದಲ್ಲಿರುವ ಪ್ರಯತ್ನ ಮಾಡುತ್ತಿದ್ದಾರೆ

ಜಾಹೀರಾತು
ಜಾಹೀರಾತು
ಜಾಹೀರಾತು

ಇಂದು ಟ್ವಿಟ್ಟಿಗರ ಅನೇಕ ಪ್ರಶ್ನೆಗಳಿಗೆ ಪ್ರತಾಪ್​ ಅಚ್ಚರಿಯ ಉತ್ತರ ನೀಡಿದ್ದಾರೆ. ಟ್ವಿಟ್ಟಿಗರೊಬ್ಬರು ನೀವು ಬಿಜೆಪಿಗೆ ಸೇರಿಬಿಡಿ, ನಿಮ್ಮ ಪಾಪಗಳೆಲ್ಲಾ ನಾಶವಾಗಿಬಿಡುತ್ತದೆ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರತಾಪ್​, ಸಾಧ್ಯವೇ ಇಲ್ಲ. ನಾನು ಭವಿಷ್ಯ ಭಾರತದ ಪ್ರಧಾನಮಂತ್ರಿ ರಾಹುಲ್​ ಗಾಂಧಿಯವರ ಅಭಿಮಾನಿ ಎಂದು ಉತ್ತರಿಸುವ ಮೂಲಕ ಮೋದಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

 

ಮತ್ತೋರ್ವ ನೆಟ್ಟಿಗ ಡ್ರೋನ್​ ಸಂಬಂಧಿಸಿದ ಲಿಫ್ಟ್​ ಆಯಂಡ್​ ಡ್ರ್ಯಾಗ್ ಎಂದರೇನು? ಎಂದು ಪ್ರತಾಪ್​ ಅವರನ್ನು ಪ್ರಶ್ನಿಸಿ ಕಾಲೆಳೆದಿದ್ದಾರೆ. ಇದಕ್ಕೆ ಉತ್ತರ ನೀಡಿರುವ ಪ್ರತಾಪ್ ನಿಮಗೆ ಗೊತ್ತಿದ್ದರೆ, ನೀವೇ ಏಕೆ ವಿವರಿಸಬಾರದು ಎಂದು ಪ್ರತಿಕ್ರಿಯಿಸಿದ್ದು, ಆಕ್ರೋಶಕ್ಕೆ ಗುರಿಯಾಗಿದ್ದಾರೆ.​