Sunday, January 19, 2025
ಸುದ್ದಿ

ಮಾರ್ಚ್ 23 ರಂದು ತೆರೆಯ ಮೇಲೆ ಬರಲಿದೆ ಬಹುನಿರೀಕ್ಷಿತ ಕಿಶೋರ್ ಮೂಡಬಿದ್ರೆ ನಿರ್ದೇಶನದ ” ಅಪ್ಪೆ ಟೀಚರ್ ” – ಕಹಳೆ ನ್ಯೂಸ್

ಮಂಗಳೂರು : ಸಹಜವಾಗಿ ಟೈಟಲ್‌ ಮೂಲಕವೇ ಕೋಸ್ಟಲ್‌ವುಡ್‌ನ‌ಲ್ಲಿ ನಿರೀಕ್ಷೆ ಮೂಡಿಸುವ ಸಿನೆಮಾ “ಅಪ್ಪೆ ಟೀಚರ್”. ಮಾರ್ಚ್ 23 ರಂದು ಸಿನಿಮಾ ತೆರೆ ಮೇಲೆ ಅಪ್ಪಳಿಸಲಿದೆ ಎಂದು ಚಿತ್ರ ತಂಡ ತಿಳಿಸಿದೆ.

ಬಳಿಕ ವಿಧ ವಿಧದ ಪೋಸ್ಟರ್‌ ಮೂಲಕ ವಿಭಿನ್ನತೆಯನ್ನು ಸಾರುತ್ತದೆ. ಇತ್ತೀಚೆಗೆ ಬಂದ ಹಲವು ತುಳು ಚಿತ್ರಗಳು ಪೋಸ್ಟರ್‌ ಮೂಲಕವೇ ಸಾಕಷ್ಟು ಸುದ್ದಿ ಮಾಡಿತ್ತು. ಕುತೂಹಲ ಕೂಡ ಸೃಷ್ಟಿಸಿತ್ತು. ಅಂದಹಾಗೆ, ಈಗ ‘ಅಪ್ಪೆ ಟೀಚರ್‌’ ಸಿನೆಮಾ ವಿಭಿನ್ನ ಪ್ರಚಾರದಿಂದ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡುತ್ತಿದೆ. ಅದರಲ್ಲೂ, ತುಳು ಚಿತ್ರರಂಗದಲ್ಲಿ ಮೊದಲ ಬಾರಿಗೆ ‘ಅಪ್ಪೆ ಟೀಚರ್‌’ ಸಿನೆಮಾ 360 ಡಿಗ್ರಿ ಪೋಸ್ಟರ್‌ನಲ್ಲಿ ಗುರುವಾರದಿಂದ ಕಾಣಿಸಿಕೊಂಡು ಕೋಸ್ಟಲ್‌ ವುಡ್‌ನ‌ಲ್ಲಿ ಬೆರಗು ಹುಟ್ಟಿಸಿದ್ದಂತು ನಿಜ. ಇಂತಹ ಪ್ರಯತ್ನ ತುಳು ಚಿತ್ರರಂಗದಲ್ಲಿ ಮೊದಲ ಬಾರಿಗೆ ನಡೆಯುತ್ತಿದೆ ಎಂಬುದು ನಿರ್ದೇಶಕ ಕಿಶೋರ್‌ ಮೂಡಬಿದಿರೆಯವರ ಅನಿಸಿಕೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅಪ್ಪೆ ಟೀಚರ್ ಚಿತ್ರದಲ್ಲಿ ಅಶ್ವಿನಿ ನಕ್ಷತ್ರ ಧಾರವಾಹಿಯಲ್ಲಿ ಜೆ.ಕೆ ತಮ್ಮನ ಪಾತ್ರದಲ್ಲಿ ಕಾಣಿಸಿಕೊಂಡ ಸುನಿಲ್ ಅವರು ಪ್ರಥಮ ಬಾರಿಗೆ ತುಳು ಚಿತ್ರರಂಗದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿದ್ದು, ಪುತ್ತೂರಿನ ನಿರೀಕ್ಷಾ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ.

ಉಳಿದಂತೆ ಕರಾವಳಿಯ ದಿಗ್ಗಜರಾದ ನವೀನ್.ಡಿ.ಪಡೀಲ್, ಭೋಜರಾಜ ವಾಮಂಜೂರು, ಅರವಿಂದ ಬೋಳಾರ್, ಗೋಪಿನಾಥ್ ಭಟ್, ಮೊದಲಾದ ಅನೇಕ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.

ರತ್ನಾಕರ್ ಕಾಮತ್ ಮತ್ತು ಗಣೇಶ್ ಕಾಮತ್ ನಿರ್ಮಾಣದ ಈ ಚಿತ್ರದಲ್ಲಿ ವನಿಲ್ ವೇಗಸ್ ಅವರ ಸಂಗೀತವಿದೆ. ಉದಯ್ ಲೀಲಾ ಅವರ ಛಾಯಾಗ್ರಹಣ ಚಿತ್ರದಲ್ಲಿದ್ದು, ಪ್ರದೀಪ್ ನಾಯಕ್ ಅವರ ಸಂಕಲನವಿದೆ. ರಾಮದಾಸ್ ಸಸಿಹಿತ್ಲು, ಮಣಿ ಎ.ಜೆ, ಸಂದೀಪ್ ಬೆದ್ರ ಚಿತ್ರಕ್ಕೆ ಸಹನಿರ್ದೇಶನ ಮಾಡಿದ್ದಾರೆ.

ವರದಿ : ಕಹಳೆ ನ್ಯೂಸ್