Recent Posts

Friday, November 22, 2024
ರಾಜ್ಯಸುದ್ದಿ

ಅಂತರ್‌ಜಿಲ್ಲಾ ಜಾನುವಾರು ಕಳ್ಳರನ್ನು ಬಂಧಿಸಿದ ದಕ್ಷ ಅಧಿಕಾರಿ – ಕಹಳೆ ನ್ಯೂಸ್

ದಾವಣಗೆರೆ: ವಿವಿಧ ಜಿಲ್ಲೆಗಳಲ್ಲಿ ಜಾನುವಾರು ಕಳವು ಮಾಡುತ್ತಿದ್ದ ಆರೋಪದಲ್ಲಿ ಮೂವರನ್ನು ಬಂಧಿಸಿರುವ ಪೊಲೀಸರು ಏಳು ಜಾನುವಾರು. ಒಂದು ಮಿನಿ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.

ತಾಲ್ಲೂಕಿನ ದೊಡ್ಡಮಾಗಡಿ ಗ್ರಾಮದ ವಿನೋದ್‌ರಾಜ್‌ (29), ಬಳ್ಳಾರಿ ಜಿಲ್ಲೆ ಹರಪನಹಳ್ಳಿಯ ಮಡಕಿ ನಿಚ್ಚಾಪುರ ತಾಂಡಾದ ಪ್ರವೀಣ್‌ನಾಯ್ಕ (24), ಉಮೇಶನಾಯ್ಕ (24) ಬಂಧಿತ ಆರೋಪಿಗಳು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಬುಧವಾರ ಮಾಹಿತಿ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಟಿಹಳ್ಳಿ ತಾಂಡಾದ ಮಂಜನಾಯ್ಕ ಅವರ ಎರಡು ಹಸುಗಳು ಜುಲೈ 17ರಂದು ಮನೆ ಪಕ್ಕದ ಕೊಟ್ಟಿಗೆಯಿಂದಲೇ ಕಳವಾಗಿದ್ದವು. ಈ ಬಗ್ಗೆ ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಅದರ ಪತ್ತೆಗಾಗಿ ತಂಡ ರಚನೆ ಮಾಡಲಾಗಿತ್ತು. ಇದಲ್ಲದೇ ತಾಲ್ಲೂಕಿನ ಗುಡಾಳ್‌, ಲಂಬಾಣಿಹಟ್ಟಿ, ಸಿದ್ಧನೂರು, ನೇರ್ಲಿಗಿ, ಲಕ್ಷ್ಮೀಪುರ ಕಡೆಗಳಲ್ಲೂ ಜಾನುವಾರು ಕಳವಾಗಿದ್ದವು ಎಂದು ವಿವರಿಸಿದರು.

 

ಗುಡಾಳ್‌ನಲ್ಲಿ ನಮ್ಮ ತಂಡ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಅವರು ಜಾನುವಾರು ಕಳವು ಮಾಡಿ ಮಿನಿ ಲಾರಿ ಮೂಲಕ ಚಿಕ್ಕಮಗಳೂರಿನ ಎಂ.ಎಲ್.ತಾಂಡಾದ ಲೋಕೇಶ್ ಎಂಬಾತನಿಗೆ ಮಾರುತ್ತಿದ್ದುದಾಗಿ ಬಾಯಿ ಬಿಟ್ಟಿದ್ದಾರೆ. ಅವರಿಂದ ಮಿನಿಲಾರಿ, 3 ಲಕ್ಷ ಮೌಲ್ಯದ ಏಳು ಹಸುಗಳನ್ನು ವಶಪಡಿಸಿಕೊಲ್ಳಲಾಗಿದೆ ಎಂದರು.

ಜಗಳೂರು ಸೇರಿ ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಜಾನುವಾರುಗಳ ಕಳ್ಳತನ ಪ್ರಕರಣ ತಡೆಗಾಗಿ ರಾತ್ರಿ ಗಸ್ತು ಮಾಡಲು ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಉತ್ತರಿಸಿದರು.

 

ಹೆಚ್ಚುವರಿ ಎಸ್‌ಪಿ ಎಂ.ರಾಜೀವ್, ಗ್ರಾಮಾಂತರ ಉಪವಿಭಾಗದ ಡಿವೈಎಸ್‌ಪಿ ನರಸಿಂಹ ವಿ.ತಾಮ್ರಧ್ವಜ, ಗ್ರಾಮಾಂತರ ಸಿಪಿಐ ಬಿ.ಮಂಜುನಾಥ್, ಪಿಎಸ್‌ಐಗಳಾದ ಸಂಜೀವ್‌ಕುಮಾರ್, ಎಂ.ಪಾಷಾ, ಸಿಬ್ಬಂದಿ ಪರಶುರಾಮ್, ಪ್ರಕಾಶ್, ನಾಗರಾಜಯ್ಯ, ಅರುಣಕುಮಾರ ಕುರುಬರ, ರಾಘವೇಂದ್ರ, ಉಮೇಶ್ ಬಿಸನ್ನಳ್ಳಿ, ಶಾಂತರಾಜ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.