Friday, November 22, 2024
ಪುತ್ತೂರುಸುದ್ದಿ

ಅಕ್ರಮ ಗೋಸಾಗಟ, ಗೋ ಹತ್ಯೆ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಅಗ್ರಹಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಪುತ್ತೂರು ಜಿಲ್ಲಾ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಪುತ್ತೂರು ಸಹಾಯಕ ಕಮೀಷನರ್ ಮೂಲಕ ಮನವಿ- ಕಹಳೆ ನ್ಯೂಸ್

ಪುತ್ತೂರು: ರಾಜ್ಯದಲ್ಲಿ ಕರ್ನಾಟಕ ಪ್ರಾಣಿಬಲಿ ನಿಷೇಧ ಕಾಯ್ದೆ 1959 (ತಿದ್ದುಪಡಿ 1975) ಜಾರಿಯಲ್ಲಿದ್ದು ಅದರ ಪ್ರಕಾರ ಯಾವುದೇ ಪ್ರಾಣಿಗಳನ್ನು ಯಾವುದೇ ಧರ್ಮದವರು ಬಲಿಕೊಡುವುದಕ್ಕೆ ನಿಷೇಧವಿದೆ.

ಈ ರಾಜ್ಯದಲ್ಲಿ ಕರ್ನಾಟಕ ಗೋಹತ್ಯೆ ನಿಷೇಧ ಹಾಗೂ ಜಾನುವಾರು ಸಂರಕ್ಷಣಾ ಕಾಯ್ದೆ 1964 ಜಾರಿಯಲ್ಲಿದ್ದು ಅದರ ಪ್ರಕಾರ ದನ,ಎಮ್ಮೆಗಳನ್ನು ಅಧಿಕೃತ ವಧಾಗೃಹದಲ್ಲಿ ಮಾತ್ರ ವಧಿಸಬಹುದಾಗಿದೆ 12 ವರ್ಷ ದಾಟಿದ ಎತ್ತು.ಕೋಣ.ದನ.ಎಮ್ಮೆಗಳನ್ನು ಅಧಿಕೃತ ವಧಾಗೃಹದಲ್ಲಿ ಮಾತ್ರ ವಧಿಸಬಹುದು ಇವುಗಳನ್ನು ಎಲ್ಲೆಂದರಲ್ಲಿ ಬಲಿ ಕೊಡುವುದಕ್ಕೆ.ವಧಿಸುವುದಕ್ಕೆ ನಿಷೇಧವಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮುಂದಿನ ಬಕ್ರೀದ್ ಸಂದರ್ಭದಲ್ಲಿ ಇಷ್ಟು ವರ್ಷಗಳ ಅನುಭವದಂತೆ ಬೃಹತ್ ಪ್ರಮಾಣದಲ್ಲಿ ಕಾನೂನು ಬಾಹಿರ ಪ್ರಾಣಿಗಳ ಅಕ್ರಮ ಸಾಗಟ ಹಾಗೂ ಬಲಿ ನಡೆಯುವ ಸಾಧ್ಯತೆ ಇದ್ದು ಇದರ ಬಗ್ಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೆಕೆಂದುದು ಆಗ್ರಹಿಸಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಪುತ್ತೂರು ಉಪವಿಭಾಗ ಸಹಾಯಕ ಕಮೀಷನರ್ ಮೂಲಕ ವಿಶ್ವ ಹಿಂದೂ ಪರಿಷತ್ ಬಜರಂಗದಳ ಪುತ್ತೂರು ಜಿಲ್ಲೆಯ ವತಿಯಿಂದ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಅಧ್ಯಕ್ಷರಾದ ಡಾ.ಕೃಷ್ಣ ಪ್ರಸನ್ನ ,ಬಜರಂಗದಳ ಪುತ್ತೂರು ಜಿಲ್ಲಾ ಸಂಚಾಲಕ ಶ್ರೀಧರ್ ತೆಂಕಿಲ,ಬಜರಂಗದಳ ಪುತ್ತೂರು ಜಿಲ್ಲಾ ಸಾಪ್ತಾಹಿಕ ಮಿಲನ್ ಪ್ರಮುಖ್ ಜೀತೆಶ್ ಬಲ್ನಾಡ್ ಉಪಸ್ಥಿತರಿದ್ದರು.