ರಾಮ ಮಂದಿರದ ಅಡಿಪಾಯಕ್ಕೆ ನಿಗದಿಪಡಿಸಿರುವ ‘ಟೈಮ್ ಬ್ಯಾಡ್ ಟೈಮ್’ ; ಸ್ವರೂಪಾನಂದ್ ಸರಸ್ವತಿ ಅಸಮಾಧಾನ – ಕಹಳೆ ನ್ಯೂಸ್
ನವದೆಹಲಿ : ಅಯೋಧ್ಯೆಯಲ್ಲಿರುವ ರಾಮ ದೇವಾಲಯದ ಅಡಿಪಾಯವನ್ನು ಹಾಕುವುದಕ್ಕೆ ನಿಗದಿಪಡಿಸಿರುವ ಸಮಯಕ್ಕೆ ಜ್ಯೋತಿಶ್‌ಪೀಠದ ಸ್ವರೂಪಾನಂದ ಸರಸ್ವತಿ ಶಂಕರಾಚಾರ್ಯರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಅದನ್ನು ಕೆಟ್ಟಗಳಿಗೆ ಅಂತ ಕರೆದಿದ್ದಾರೆ.
ಖಾಸಗಿ ಮಾಧ್ಯಮವೊಂದರ ಜೊತೆಗೆ ಮಾತನಾಡಿರುವ ಅವರು ನಾವು ಯಾವುದೇ ಸ್ಥಾನವನ್ನು ಬಯಸುವುದಿಲ್ಲ ಅಥವಾ ರಾಮ್ ದೇವಾಲಯದ ಟ್ರಸ್ಟಿಯಾಗಲು ಬಯಸುವುದಿಲ್ಲ. ದೇವಾಲಯವನ್ನು ಸರಿಯಾಗಿ ನಿರ್ಮಿಸಬೇಕು ಮತ್ತು ಸರಿಯಾದ ಸಮಯದಲ್ಲಿ ಅಡಿಪಾಯ ಹಾಕಬೇಕು ಎಂದು ನಾವು ಬಯಸುತ್ತೇವೆ, ಆದರೆ ಇದು ‘ಅಶುಬ್ ಗಡಿ’ (ಅಶುಭಸಮಯ) ಅಂತ ಹೇಳಿದ್ದಾರೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಕೋರಿಕೆಯ ಮೇರೆಗೆ ಆಗಸ್ಟ್ 5 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯ ರಾಮ ದೇವಾಲಯದ ಅಡಿಪಾಯ ಹಾಕಲಿದ್ದಾರೆ.
ಉತ್ತರಪ್ರದೇಶದಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ ಅಯೋಧ್ಯೆಯಲ್ಲಿ ಅಡಿಪಾಯದ ಕಲ್ಲು ಹಾಕುವ ಸಮಾರಂಭದಲ್ಲಿ 150 ಆಹ್ವಾನಿತರು ಸೇರಿದಂತೆ 200 ಕ್ಕೂ ಹೆಚ್ಚು ಜನರು ಇರುವುದಿಲ್ಲ ತಿಳಿದು ಬಂಧಿದೆ. ಅಯೋಧ್ಯೆಯಲ್ಲಿ ರಾಮ ದೇವಾಲಯದ ನಿರ್ಮಾಣದ ಮೇಲ್ವಿಚಾರಣೆಗೆ ಕೇಂದ್ರವು ರಚಿಸಿದ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸಂಯೋಜನೆಯ ಬಗ್ಗೆ ಫೆಬ್ರವರಿಯಲ್ಲಿ ಸ್ವರೂಪಾನಂದ್ ಸರಸ್ವತಿ ಅಸಮಾಧಾನ ವ್ಯಕ್ತಪಡಿಸಿದ್ದರು.