ಉಡುಪಿ : ಜಿಲ್ಲೆಯಲ್ಲಿ ಕೋವಿಡ್ ಅಬ್ಬರ ಜೋರಾಗಿದ್ದು ಗುರುವಾರ 160 ಮಂದಿಯಲ್ಲಿ ಹೊಸ ಕೋವಿಡ್ ಸೋಂಕಿನ ಪ್ರಕರಣಗಳು ದೃಢಪಟ್ಟಿವೆ. 70 ವರ್ಷದ ಮಹಿಳೆಯೊಬ್ಬರು ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಬುಧವಾರ ಜಿಲ್ಲೆಯಲ್ಲಿ ಅತೀ ಹೆಚ್ಚು ಪ್ರಕರಣಗಳು ದೃಢಪಟ್ಟಿದು ಇಂದು ಮತ್ತೆ 160 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಪಡುಬಿದ್ರಿ ಪರಿಸರದಲ್ಲಿ 12 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ, ಇಲ್ಲಿನ ಪ್ರಾಥಮಿಕ ಅರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಹೆಜಮಾಡಿ, ಉಚ್ಚಿಲ, ನಡ್ಸಾಲ್, ಗ್ರಾಮಗಳ ವ್ಯಕ್ತಿಗಳಲ್ಲಿ ಸೋಂಕು ಹರಡಿದ್ದು ಇವರೆಲ್ಲರೂ ಈ ಹಿಂದಿನ ರೋಗಿಗಳ ಸಂಪರ್ಕಕ್ಕೆ ಬಂದವರಾಗಿದ್ದಾರೆ.
ಸಂಕಲಕರಿಯದಲ್ಲಿ ಸೋಂಕು ದೃಢ, ಮನೆಗಳು ಸೀಲ್‌ಡೌನ್ :
ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಸಂಕಲಕರಿಯದ ವ್ಯಕ್ತಿಯೋರ್ವರಲ್ಲೂ ಸೋಂಕು ದೃಢವಾಗಿದ್ದು ಕಳೆದ ಶುಕ್ರವಾರ ವರದಿ ನೆಗೆಟಿವ್ ಆಗಿತ್ತು ಗುರುವಾರ ಏಕಾಏಕಿ ಪಾಸಿಟಿವ್ ಆದ ಬಗ್ಗೆ ಕಳವಳ ವ್ಯಕ್ತವಾಗಿದೆ. ಸೋಂಕಿತ ವ್ಯಕ್ತಿ ಹುಷಾರಾಗಿದ್ದು ಜ್ವರ ಅಥವಾ ಯಾವುದೇ ಕುರುಹುಗಳಿಲ್ಲದೆ ಎನ್ನಲಾಗಿದೆ ಸೋಂಕು ದೃಢಗೊಂಡ ಹಿನ್ನೆಲೆಯಲ್ಲಿ ಅಕ್ಕ ಪಕ್ಕದ ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಸೋಂಕಿತ ವ್ಯಕ್ತಿಯ ಸಂಪರ್ಕ ಹೊಂದಿದ ಜನರ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ಕೋಟೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮತ್ತು ದಾದಿಗೆ ಕೋವಿಡ್ ಸೋಂಕು ತಗಲಿದೆ. ಆರೋಗ್ಯ ಕೇಂದ್ರವನ್ನು 2 ದಿನಗಳ ಕಾಲ ಸೀಲ್‌ಡೌನ್ ಮಾಡಲಾಗಿದೆ. ಬೀಜಾಡಿಯಲ್ಲಿ 2 ಪ್ರತ್ಯೇಕ ಪ್ರಕರಣಗಳು ಪತ್ತೆಯಾಗಿವೆ.