ಎಚ್ಚರ.ಎಚ್ಚರ.! ‘ಮಾಸ್ಕ್’ ಧರಿಸದಿದ್ರೆ 1 ಲಕ್ಷ ರೂ ದಂಡ ; ‘ಲಾಕ್ ಡೌನ್’ ಉಲ್ಲಂಘಿಸಿದ್ರೆ 2 ವರ್ಷ ಜೈಲು – ಕಹಳೆ ನ್ಯೂಸ್
ಭಾರತದಲ್ಲಿ ಮಹಾಮಾರಿ ಕೊರೊನಾ ಸೋಂಕು ವ್ಯಾಪಕವಾಗಿ ಹೆಚ್ಚಳವಾಗುತ್ತಿದೆ, ಎಲ್ಲಾ ರಾಜ್ಯಗಳಲ್ಲೂ ಕೂಡ ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಸಾಕಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ.
ಅಂತೆಯೇ ಜಾರ್ಖಂಡ್ ಸರ್ಕಾರ ಲಾಕ್ ಡೌನ್ ನಿಯಮ ಉಲ್ಲಂಘಿಸುವವರಿಗೆ ತಕ್ಕ ಪಾಠ ಕಲಿಸಲು ಮುಂದಾಗಿದೆ. ಎಷ್ಟೇ ಎಚ್ಚರಿಕೆ ನೀಡಿದರೂ ಡೋಂಟ್ ಕೇರ್ ಎಂದ ಜನರಿಗೆ ಬುದ್ದಿ ಕಲಿಸಲು ಸರ್ಕಾರ ಮುಂದಾಗಿದೆ.
ಹೌದು, ಜಾರ್ಖಂಡ್ ರಾಜ್ಯದಲ್ಲಿ ಇನ್ನು ಲಾಕ್ ಡೌನ್ ನಿಯಮ ಉಲ್ಲಂಘಿಸಿದ್ರೆ 2 ವರ್ಷ ಜೈಲು ಶಿಕ್ಷೆ ಖಚಿತ, ಹಾಗೂ ಮಾಸ್ಕ್ ಧರಿಸದೇ ಹೊರ ಬಂದರೆ 1 ಲಕ್ಷ ರೂ ದಂಡ ವಿಧಿಸಲು ಸರ್ಕಾರ ನಿರ್ಧರಿಸಿದೆ. ಈ ಭಯದಲ್ಲಾದರೂ ಜನ ಹೊರಗಡೆ ಬರದಿರಲಿ ಎಂದು ಜಾರ್ಖಂಡ್ ಸರ್ಕಾರ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಕರ್ನಾಟಕದಲ್ಲಿ ಲಾಕ್ ಡೌನ್ ಫ್ರೀ ಆಗಿದ್ದು, ಮಹಾಮಾರಿ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ.