Sunday, January 19, 2025
ಕಡಬಸುದ್ದಿ

ಬಡ ಮಕ್ಕಳಿಗೆ ಸಿಗುತಿಲ್ಲ ಆನ್ ಲೈನ್ ಶಿಕ್ಷಣ ! 5 ದಿನಗಳಿಂದ ‘ಚಂದನ ಪಾಠ’ ಕೂಡ ಇಲ್ಲ ಕಡಬದ ಈ ಅಣ್ಣಾ-ತಂಗಿಗೆ:-ಕಹಳೆ ನ್ಯೂಸ್

ಕೋವಿಡ್-19 ಕಾರಣದಿಂದಾಗಿ ಶಾಲಾ-ಕಾಲೇಜುಗಳು ಸ್ಥಗಿತಗೊಂಡಿದ್ದು, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಈಗಾಗಲೇ ಆನ್‍ಲೈನ್ ತರಗತಿಗಳು ಆರಂಭಗೊಂಡಿವೆ.

ಆದ್ರೆ ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ದೊಡ್ಡಕೊಪ್ಪ ನಿವಾಸಿಯಾದ ವರುಣ್, ಎಲ್ಲಾ ವಿದ್ಯಾರ್ಥಿಗಳಂತೆ ತಾನೂ ಕಲಿತು ತನ್ನ ಕುಟುಂಬಕ್ಕೆ, ಅನಾರೋಗ್ಯ ಪೀಡಿತ ತಂದೆಗೆ ಆಸರೆಯಾಗಬೇಕು ಅನ್ನೋ ಅಭಿಲಾಷೆಯನ್ನ ಇಟ್ಕೊಂಡಿದ್ದ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನೂ ಈ ಬಾಲಕನ ತಾಯಿ ಬೀಡಿ ಕೆಲಸ ಮಾಡ್ತಾ ಇದ್ದು, ತಂಗಿ 8 ನೇ ತರಗತಿಯಲ್ಲಿ ಓದ್ತಾ ಇದ್ದಾಳೆ. ಬಡತನದಲ್ಲಿ ದಿನದೂಡ್ತ ಇರುವ ವರುಣ್ ಮನೆಯಲ್ಲಿ ಆನ್ಲೈನ್ ತರಗತಿಗೆ ಬೇಕಾದ ಒಂದು ಟಿವಿಯಾಗಲೀ, ಸ್ಮಾರ್ಟ್ ಫೊೀನ್ ಆಗಲೀ ಇಲ್ಲ. ಇಷ್ಟು ಮಾತ್ರವಲ್ಲದೇ ಇವರಿಗೆ ವಾಸಕ್ಕೆ ಒಂದು ಸರಿಯಾದ ಮನೆಯೂ ಇಲ್ಲ. ಎಲ್ಲಾ ಮಕ್ಕಳು ಟಿವಿ, ಮೊಬೈಲ್ ಮೂಲಕ ಶಿಕ್ಷಣ ಪಡೆಯುತ್ತಿರಬೇಕಾದರೆ ಈ ಮಕ್ಕಳು ಮತ್ತು ಇವರ ಪೊೀಷಕರು ತಮ್ಮ ಭವಿಷ್ಯದ ಬಗ್ಗೆ ಚಿಂತೆಯಲ್ಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಯಾರಾದ್ರೂ ಸಹೃದಯ ದಾನಿಗಳು ಈ ಕುಟುಂಬಕ್ಕೆ ನೆರವು ನೀಡುವ ಮೂಲಕ ಈ ಮಕ್ಕಳ ಬಾಳಿಗೆ ಬೆಳಕಾಗಬೇಕಿದೆ.