Sunday, January 19, 2025
ಕಡಬ

ಕಡಬ: ಅಕ್ರಮ ಗೋ ಸಾಗಾಟ ಗೋ ಹತ್ಯೆ ವಿರುದ್ಧ ವಿಶ್ವ ಹಿಂದು ಪರಿಷತ್ ಬಜರಂಗದಳ ಕಡಬ ಪ್ರಖಂಡ ವತಿಯಿಂದ ಕಡಬ ಠಾಣೆಗೆ ಮನವಿ- ಕಹಳೆ ನ್ಯೂಸ್

ಕಡಬ: ಅಕ್ರಮ ಗೋ ಸಾಗಾಟ ಗೋ ಹತ್ಯೆ ವಿರುದ್ಧ ವಿಶ್ವ ಹಿಂದು ಪರಿಷತ್ ಬಜರಂಗದಳ ಕಡಬ ಪ್ರಖಂಡ ವತಿಯಿಂದ ಕಡಬ ಠಾಣೆಗೆ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಕರ್ನಾಟಕ ಪ್ರಾಣಿ ಬಲಿ ನಿಷೇಧ ಕಾಯ್ದೆ 1959 ( ತಿದ್ದು ಪಡಿ1975) ಜಾರಿಯಲ್ಲಿದ್ದು ಅದರ ಪ್ರಕಾರ ಯಾವುದೇ ಧರ್ಮದವರು ಬಲಿ ಕೊಡುವುದಕ್ಕೆ ನಿಷೇದವಿದೆ. ಕರ್ನಾಟಕ ಗೋ ಹತ್ಯೆ ನಿಷೇದ ಹಾಗೂ ಜಾನುವಾರು ಸಂರಕ್ಷಣಾ ಕಾಯ್ದೆ 1964 ಜಾರಿಯಲ್ಲಿದ್ದು ಅದರ ಪ್ರಕಾರ ದನ , ಎಮ್ಮೆಗಳನ್ನು ಅಧಿಕೃತ ವಾಧ ಗೃಹದಲ್ಲಿ ಮಾತ್ರ ವಧಿಸಬಹುದಾಗಿದೆ.12 ವರ್ಷ ದಾಟಿದ ಎತ್ತು ,ಕೋಣ , ದನ , ಎಮ್ಮೆ ಗಳನ್ನೂ ಅಧಿಕೃತ ವಧಾಗೃಹದಲ್ಲಿ ಮಾತ್ರ ವಧಿಸಬಹುದು. ಇವುಗಳನ್ನು ಎಲ್ಲೆಂದರಲ್ಲಿ ಬಲಿ ಕೊಡುವುದಕ್ಕೆ ವಧಿಸುದಕ್ಕೆ ನಿಷೇಧವಿದೆ.

ಮುಂದಿನ ಬಕ್ರೀದ್ ಸಂದರ್ಭದಲ್ಲಿ ಇಷ್ಟು ವರ್ಷಗಳ ಅನುಭವದಂತೆ ಬ್ರಹತ್ ಪ್ರಮಾಣದಲ್ಲಿ ಕಾನೂನು ಬಾಹಿರ ಪ್ರಾಣಿಗಳ ಅಕ್ರಮ ಸಾಗಾಟ ಹಾಗೂ ಬಲಿ ನಡೆಯುವ ಸಾಧ್ಯತೆ ಇದ್ದು ಇದರ ಬಗ್ಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ವಿಶ್ವ ಹಿಂದು ಪರಿಷತ್ ಬಜರಂಗದಳ ಮನವಿಯಲ್ಲಿ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಶ್ವ ಹಿಂದು ಪರಿಷತ್ ಕಡಬ ಪ್ರಖಂಡ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ , ಕಾರ್ಯದರ್ಶಿ ಪ್ರಮೋದ್ ರೈ ನಂದುಗುರಿ , ಪ್ರಖಂಡ ಸಂಚಾಲಕ ಮೂಲಚಂದ್ರ ಕಾಂಚಾನ, ಬಜರಂಗದಳ ಮುಖಂಡ ಸಂತೋಷ್ ಕುಮಾರ್ ಕೋಡಿಬೈಲು ,ಮೊದಲಾದವರು ಉಪಸ್ಥಿತರಿದ್ದರು

ಜಾಹೀರಾತು
ಜಾಹೀರಾತು
ಜಾಹೀರಾತು