ದ.ಕ. ಜಿಲ್ಲೆಯಲ್ಲಿ 199 ಮಂದಿಯಲ್ಲಿ ಸೋಂಕು-90 ಮಂದಿ ಗುಣಮುಖ :ಸೋಂಕಿತರ ಸಂಖ್ಯೆ 4811ಕ್ಕೆ ಏರಿಕೆ-ಕಹಳೆ ನ್ಯೂಸ್
ದ.ಕ. ಜಿಲ್ಲೆಯಲ್ಲಿ 199 ಹೊಸ ಪಾಸಿಟಿವ್ ಪ್ರಕರಣಗಳು ರವಿವಾರದಂದು ಪತ್ತೆಯಾಗಿವೆ. ಆ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4811ಕ್ಕೆ ಏರಿಕೆಯಾಗಿದೆ.
ರವಿವಾರದಂದು 90 ಮಂದಿ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಒಟ್ಟು 2217 ಮಂದಿ ಜಿಲ್ಲೆಯಲ್ಲಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಇನ್ನು 2471 ಮಂದಿಗೆ ಸದ್ಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ರವಿವಾರ ಪತ್ತೆಯಾದ ಪ್ರಕರಣಗಳ ಪೈಕಿ 31 ಮಂದಿಯಲ್ಲಿ ಪ್ರಾಥಮಿಕ ಸಂಪರ್ಕದಿಂದ ಸೋಂಕು ಪತ್ತೆಯಾಗಿದೆ. 73 ಐ ಎಲ್ ಐ ಪ್ರಕರಣಗಳಾಗಿವೆ. 10 ಸಾರಿ ಪ್ರಕರಣಗಳಾಗಿವೆ. ಇಬ್ಬರು ವಿದೇಶದಿಂದ ಮರಳಿದವರಲ್ಲಿ ಸೋಂಕು ಪತ್ತೆಯಾಗಿದೆ. 83 ಮಂದಿಯ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ.