ನವದೆಹಲಿ : ಭಾರತವು ಚೀನಾಕ್ಕೆ ಮತ್ತೊಂದು ಬಿಗ್ ಶಾಕ್ ನೀಡಿದ್ದು, ಮತ್ತೆ 47 ಚೀನಿ ಆಯಪ್ ಗಳನ್ನು ಬ್ಯಾನ್ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಒಟ್ಟು 106 ಚೀನಾ ಆಯಪ್ ಗಳನ್ನು ಭಾರತ ಬ್ಯಾನ್ ಮಾಡಿದೆ.
ರಾಷ್ಟ್ರೀಯ ಭದ್ರತೆ ಮತ್ತು ಬಳಕೆದಾರರ ಗೌಪ್ಯತೆಯ ಉಲ್ಲಂಘನೆಗಾಗಿ ಒಟ್ಟು 275 ಆಯಪ್ ಗಳು ಸರ್ಕಾರಿ ರಾಡಾರ್ ನಲ್ಲಿವೆ. ಶೀಘ್ರದಲ್ಲೇ ಸರ್ಕಾರವು ಇವುಗಳನ್ನು ನಿಷೇಧಿಸುವ ಸಾಧ್ಯತೆ ಇದೆ.
ಗಡಿಯಲ್ಲಿ ಚೀನಾದ ಕ್ಯಾತೆ ಹೆಚ್ಚಾದ ಹಿನ್ನೆಲೆಯಲ್ಲಿ ಕಳೆದ ತಿಂಗಳು 29 ರಂದು ಟಿಕ್ ಟಾಕ್ ಸೇರಿ 59 ಚೀನಿ ಆಯ್ಪಾ ಗಳನ್ನು ಭಾರತ ಬ್ಯಾನ್ ಮಾಡಿತ್ತು. ಇದೀಗ ಮತ್ತೆ ಮತ್ತೆ 47 ಚೀನಿ ಆಯಪ್ ಗಳನ್ನು ಬ್ಯಾನ್ ಮಾಡಿದೆ.