Monday, November 25, 2024
ಸುದ್ದಿ

ಹಿಂದೂ ಧರ್ಮಕ್ಕಿರುವ ಶಕ್ತಿಯೇ ಅಂಥದ್ದು. ಶುದ್ಧ ಭಕ್ತಿ, ಪ್ರೇಮದಿಂದ ಬರುವ ಯಾವುದೇ ಧರ್ಮೀಯರಿಗೂ ಹೃದಯದಲ್ಲಿ ಜಾಗಕೊಡುತ್ತದೆ -ಧರ್ಮದ ಹಂಗುತೊರೆದು ಭಗವಾನ್ ಶ್ರೀರಾಮ ಮಂದಿರದ ಭೂಮಿಪೂಜೆಗೆ ಸಾವಿರಾರು ಕಿ.ಮೀ.ದೂರದಿಂದ ಬರಲಿದ್ದಾರೆ ಮುಸ್ಲಿಂ ಭಕ್ತರು-ಕಹಳೆ ನ್ಯೂಸ್

ಅಯೋಧ್ಯೆ: ಹಿಂದೂ ಧರ್ಮಕ್ಕಿರುವ ಶಕ್ತಿಯೇ ಅಂಥದ್ದು. ಶುದ್ಧ ಭಕ್ತಿ, ಪ್ರೇಮದಿಂದ ಬರುವ ಯಾವುದೇ ಧರ್ಮೀಯರಿಗೂ ಹೃದಯದಲ್ಲಿ ಜಾಗಕೊಡುತ್ತದೆ. ಇದಕ್ಕೆ ಇಲ್ಲಿ ಮತ್ತೊಂದು ಉದಾಹರಣೆ ಇದೆ ನೋಡಿ.

ಆಗಸ್ಟ್ 5 ರಂದು ನಡೆಯಲಿರುವ ಅಯೋಧ್ಯೆಯ ಶ್ರೀ ರಾಮ ಮಂದಿರದ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಛತ್ತೀಸಗಢದ ಹಳ್ಳಿಯ ಮುಸ್ಲಿಂ ವ್ಯಕ್ತಿಯೊಬ್ಬರು ಅಂದಾಜು 800 ಕಿ.ಮೀ ದೂರ ಪ್ರಯಾಣ ಕೈಗೊಳ್ಳಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಶ್ರೀರಾಮ ದೇವರ ತಾಯಿ ಕೌಶಲ್ಯೆ ಜನಿಸಿದ ಚಂದ್ಕುರಿ ಗ್ರಾಮದ ಭಕ್ತ ಮೊಹಮ್ಮದ್ ಫೈಜ್ ಖಾನ್. ಅವರು ದೇವಸ್ಥಾನವೊಂದಕ್ಕೆ ಭೇಟಿ ನೀಡಲು ಇಷ್ಟು ದೂರ ಪ್ರಯಾಣಿಸುತ್ತಿರುವುದು ಇದೇ ಮೊದಲಲ್ಲ ಎಂದೂ ಹೇಳಿಕೊಂಡಿದ್ದಾರೆ.

‘ನಾನು ದೇವಾಲಯಗಳಿಗೆ ಹೋಗುತ್ತಿರುವುದು ಇದೇ ಮೊದಲಲ್ಲ. 15,000 ಕಿ.ಮೀ ನಡೆದು ವಿವಿಧ ದೇವಾಲಯಗಳಿಗೆ ಹೋಗಿದ್ದೇನೆ. ಮಠಗಳಲ್ಲಿ ಉಳಿದುಕೊಂಡಿದ್ದೇನೆ. ಈ ಕುರಿತು ಯಾರೂ ನನಗೆ ಒಮ್ಮೆಯೂ ವಿರೋಧ ವ್ಯಕ್ತಪಡಿಸಿಲ್ಲ ಎನ್ನುತ್ತಾರೆ.

ಈ ಮುಸ್ಲಿಂ ಭಕ್ತ, ಭೂಮಿ ಪೂಜೆ ಕಾರ್ಯಕ್ರಮಕ್ಕಾಗಿ ಚಾಂದ್ಕುರಿಯಿಂದ ಮಣ್ಣನ್ನೂ ತರುತ್ತಿದ್ದಾರೆ:-

ಖಾನ್ ತಮ್ಮ ಪೂರ್ವಜರು ಹಿಂದೂಗಳು ಎಂದು ಹೇಳಿದ್ದಾರೆ. ‘ನಾನು ನನ್ನ ಹೆಸರು ಮತ್ತು ಧರ್ಮದಿಂದ ಮುಸ್ಲಿಂ, ಆದರೆ ನಾನು ಭಗವಾನ್ ಶ್ರೀ ರಾಮನ ಭಕ್ತ. ನಮ್ಮ ಪೂರ್ವಜರು ಹಿಂದೂಗಳಾಗಿದ್ದರು. ಅವರ ಹೆಸರುಗಳು ರಾಮ್‌ಲಾಲ್ ಅಥವಾ ಶ್ಯಾಮ್‌ಲಾಲ್ ಎಂಬುದಾಗಿತ್ತು. ನಾವು ಚರ್ಚ್ ಅಥವಾ ಮಸೀದಿ.. ಎಲ್ಲಿಗೇ ಹೋದರೂ ಮೂಲತಃ ನಾವೆಲ್ಲರೂ ಹಿಂದೂಗಳು ಎಂದಿದ್ದಾರೆ ಶುದ್ಧ ಭಕ್ತಿಗೆ ಧರ್ಮದ ಹಂಗಿಲ್ಲ ಎನ್ನುವ ಅರ್ಥದಲ್ಲಿ.

ನಮ್ಮ ಪ್ರಮುಖ ಪೂರ್ವಜ ಭಗವಾನ್ ಶ್ರೀರಾಮನೇ. ಅಲ್ಲಮ ಇಕ್ಬಾಲ್ (ಪಾಕಿಸ್ತಾನದ ರಾಷ್ಟ್ರೀಯ ಕವಿ) ಇದನ್ನೇ ಒಂದು ರೀತಿಯಲ್ಲಿ ವಿವರಿಸಲು ಪ್ರಯತ್ನಿಸಿದ್ದರು, ಅವರು ‘ಪರಿಪೂರ್ಣ ದೃಷ್ಟಿ ಹೊಂದಿರುವವರು, ಭಗವಾನ್ ಶ್ರೀರಾಮನನ್ನೇ ಭಾರತದ ಅಧಿಪತಿ ಎಂದು ಪರಿಗಣಿಸುತ್ತಾರೆ’ ಎಂದು ಹೇಳಿದ್ದಾರೆ. ಇದೇ ಭಕ್ತಿಪೂರ್ವಕವಾಗಿ ನಾನು ಭಗವಾನ್ ಶ್ರೀರಾಮ ಮಂದಿರದ ಭೂಮಿ ಪೂಜೆಗೆ ಕೊಡುಗೆಯಾಗಿ ಸಮರ್ಪಿಸಲು ಚಾಂದ್ಕುರಿಯಲ್ಲಿರುವ ತಾಯಿ ಕೌಶಲ್ಯೆ ಜನ್ಮಸ್ಥಳದಿಂದ ಅಯೋಧ್ಯೆಗೆ ಮಣ್ಣನ್ನು ತೆಗೆದುಕೊಂಡು ಹೋಗುತ್ತೇನೆ ಎಂದಿದ್ದಾರೆ.