Breaking News : ಪುತ್ತೂರಿನಲ್ಲಿ ಇಂದು ಕೊರೊನಾ ಅಟ್ಟಹಾಸ ; ಮಂಗಳವಾರ ಒಂದೇ ದಿನ 23 ಮಂದಿಗೆ ಕೊರೊನಾ ಪಾಸಿಟಿವ್ – ಕಹಳೆ ನ್ಯೂಸ್
ಪುತ್ತೂರು, ಜು.28: ರಾಜ್ಯದಲ್ಲೇ ಕೊರೊನಾ ರುದ್ರ ನರ್ತನ ಮಾಡುತ್ತಿದ್ದು, ಮರಣ ಮೃದಂಗ ಭಾರಿಸುತ್ತಿದೆ. ಇಂದು ತಾಲೂಕಿನಲ್ಲಿ ಕೊರೊನಾ ಸೋಂಕು ತನ್ನ ಆಟ್ಟಹಾಸ ಮುಂದುವರಿಸಿದ್ದು, ಒಂದೇ ದಿನ ತಾಲೂಕಿನಲ್ಲಿ 23 ಹೊಸ ಪ್ರಕರಣಗಳು ಪತ್ತೆಯಾಗುವುದರ ಮೂಲಕ ಆತಂಕ ಸೃಷ್ಟಿಸಿದೆ. ಇಂದು ಒಂದೇ ದಿನ ತಾಲೂಕಿನಲ್ಲಿ ಪತ್ತೆಯಾದ ಗರಿಷ್ಟ ಪ್ರಕರಣ ಕಡಬ ಮತ್ತು ಪುತ್ತೂರು ತಾಲೂಕುಗಳಲ್ಲಿ ಮಂಗಳವಾರ ಒಟ್ಟು 26 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ.
ಕಡಬ ತಾಲೂಕಿನ ಮೂರು ಮುಂದಿಗೆ ಸೋಂಕು ದೃಢಪಟ್ಟರೆ, ಪುತ್ತೂರಿನಲ್ಲಿ 23 ಮಂದಿಗೆ ಸೋಂಕು ದೃಢಪಟ್ಟಿದೆ. ಉಭಯ ತಾಲೂಕುಗಳಲ್ಲಿ ಈವರೆಗೆ ಪತ್ತೆಯಾದ ಒಟ್ಟು ಪ್ರಕರಣಗಳ ಸಂಖ್ಯೆ ಇನ್ನೂರರ ಗಡಿ ದಾಟಿದೆ.
ಸದ್ಯ ಪುತ್ತುರಿನಲ್ಲಿಯೇ ಕೊವೀಡ್ ಟೆಸ್ಟ್ ಗಳು ಉಚಿತವಾಗಿ ನಡೆಯುತ್ತಿರುವರಿಂದ ಪ್ರಕರಣಗಳ ಸಂಖ್ಯೆಯೂ ಅಧಿಕಗೊಂಡಿರುವ ಸಾಧ್ಯತೆ ಇದೆ. ದರ್ಬೆಯ 36 ವರ್ಷ ಪ್ರಾಯದ ಮಹಿಳೆ ಹಾಗೂ 29, 26, 29 ವರ್ಷದ ಮೂವರು ಯುವಕರಲ್ಲಿ ಸೋಂಕು ಪತ್ತೆಯಾದಾರೆ, ಕೆಮ್ಮಿಂಜೆಯ 39 ವರ್ಷದ ಮಹಿಳೆ, 28 ವರ್ಷದ ಯುವಕ, 32 ವರ್ಷದ ಯುವಕ, 38 ವರ್ಷದ ಯುವಕನಲ್ಲಿ ಕೊರೋನ ಸೋಂಕು ಕಾಣಿಸಿಕೊಂಡಿದೆ. ಕೂರ್ನಡ್ಕದ 56 ವರ್ಷದ ಮತ್ತು 58 ವರ್ಷದ ಇಬ್ಬರು ಪುರುಷರು, ನರಿಮೊಗರಿನ 51 ಮತ್ತು 52 ವರ್ಷದ ಮಹಿಳೆ, ಮಾಡಾವಿನ 53 ವರ್ಷದ ಮಹಿಳೆ, ಶಾಂತಿಗೋಡಿನ 53 ವರ್ಷದ ಮಹಿಳೆ, ಚಿಕ್ಕ ಪುತ್ತೂರಿನ 52 ವರ್ಷದ ಪುರುಷ, ನೆಹರೂ ನಗರದ 54 ವರ್ಷದ ಪುರುಷ, ಆರ್ಯಾಪುವಿನ 22 ಮತ್ತು 18 ವರ್ಷದ ಯುವಕನಲ್ಲಿ ಮತ್ತು 42 ವರ್ಷದ ಮಹಿಳೆಯೊಬ್ಬರಲ್ಲಿ ಸೋಂಕು ದೃಢಪಟ್ಟಿದೆ.
ಕಳೆದ ಶನಿವಾರ ಆರು ಮಂದಿಯಲ್ಲಿ ಸೋಂಕು ಪತ್ತೆಯಾಗಿದ ಪುತ್ತೂರಿನ ಬಸ್ ನಿಲ್ದಾಣದ ಬಳಿಯ ಚಿನ್ನದ ಮಳಿಗೆಯ ಇನ್ನೂ ನಾಲ್ಕು ಸಿಬ್ಬಂದಿಗಳಿಗೆ ಇಂದು ಮತ್ತೆ ಸೋಂಕು ವರದಿಯಾಗಿದೆ ಈ ಮೂಲಕ ಆ ಮಳಿಗೆಯೊಂದರ ಸಿಬ್ಬಂದಿಗಳಲ್ಲಿಯೇ 10 ಪ್ರಕರಣ ಪತ್ತೆಯಾಗಿದೆ. ಅಲ್ಲಿನ 24, 33, 27 ಮತ್ತು 37 ವರ್ಷದ ನಾಲ್ವರಲ್ಲಿ ಮಂಗಳವಾರ ಕೊರೋನ ಸೋಂಕು ದೃಢಪಟ್ಟಿದೆ.
ಕಡಬ ತಾಲೂಕಿನ ಕುದ್ಮಾರಿನ 64 ವರ್ಷದ ಮಹಿಳೆ, ಗೋಳಿತ್ತೊಟ್ಟಿನ 50 ವರ್ಷದ ಪುರುಷ, ಕೊಂಬಾರಿನ 21 ವರ್ಷದ ಯುವಕನಲ್ಲಿ ಕೊರೋನ ದೃಢಪಟ್ಟಿದೆ.
ದಿನದಿಂದ ದಿನಕ್ಕೆ ಕೊರೊನಾ ಆರ್ಭಟ ಹೆಚ್ಚಾಗುತ್ತಿದ್ದು, ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.