ಕೊರೋನಾ ಸಂದರ್ಭದಲ್ಲಿ ಕಾಲೇಜು ಫೀಸ್ ಕೇಳುವಂತಿಲ್ಲ : ತಹಶೀಲ್ದಾರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್– ಕಹಳೆ ನ್ಯೂಸ್
ಸುಳ್ಯ ; ಸರಕಾರದ ನಿಯಮಗಳ ಪ್ರಕಾರ ಯಾವುದೇ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ಒತ್ತಾಯಪೂರ್ವಕವಾಗಿ ಈ ಸಂದರ್ಭದಲ್ಲಿ ಕಾಲೇಜು ಫೀಸ್ ಅನ್ನು ಕೇಳುವಂತಿಲ್ಲ… ಕೊರೋನಾದಿಂದ ಜನಸಾಮಾನ್ಯರು ಆರ್ಥಿಕವಾಗಿ ಕಂಗೆಟ್ಟಿರುವ ಈ ಸಂದರ್ಭದಲ್ಲಿ ಮುಂದಿನ ಶೈಕ್ಷಣಿಕ ವರ್ಷದ ಪೂರ್ಣ ಪ್ರಮಾಣದ ಫೀಸು ಜುಲೈ 31ರ ಒಳಗಾಗಿ ಕಟ್ಟಬೇಕೆಂದು ಸುತ್ತೋಲೆ ಹೊರಡಿಸಿದ್ದು ಎಲ್ಲರನ್ನು ಗೊಂದಲಕ್ಕೀಡು ಮಾಡಿದೆ. ಅದಲ್ಲದೆ ಸುತ್ತೋಲೆಯನ್ನು ಕೇವಲ ಹತ್ತು ದಿನಗಳ ಹಿಂದೆ ಹೊರಡಿಸಿ,ಕೊನೆಯ ದಿನಾಂಕವನ್ನು ಹೇಳಿದರೆ ಹಣ ಹೊಂದಿಸಲು ಹೇಗೆ ಸಾಧ್ಯ.
ಈ ವರ್ಷ ಹೆಚ್ಚಿನ ವಿದ್ಯಾರ್ಥಿಗಳಿಗೆ ಯಾವುದೇ ಸ್ಕಾಲರ್ಶಿಪ್ ಬಂದಿಲ್ಲ. ಅದರೊಂದಿಗೆ ಹೆತ್ತವರಿಗೆ ಉದ್ಯೋಗವೂ ಇಲ್ಲ. ಕೃಷಿ ವಹಿವಾಟುಗಳು ಕೂಡ ನಿರಂತರವಾಗಿ ನಡೆಯುತ್ತಿಲ್ಲ. ಹಾಗಾಗಿ ಕಾಲೇಜು ವಿದ್ಯಾರ್ಥಿಗಳ ಹಾಗೂ ಪೆÇೀಷಕರ ಸಮಸ್ಯೆಯನ್ನು ಅರ್ಥಮಾಡಿಕೊಂಡು ಫೀಸ್ ಕಟ್ಟಲು ಈಗಾಗಲೇ ಹೊರಡಿಸಿರುವ ದಿನಾಂಕವನ್ನು ಮುಂದೂಡಬೇಕು ಮತ್ತು ಸೂಕ್ತ ಸಮಯಾಕಾಶವನ್ನು ಒಂದೆರಡು ಇಂಟರ್ವಲ್ ಗಳ ಮೂಲಕ ನೀಡಬೇಕೆನ್ನುವುದು ವಿದ್ಯಾರ್ಥಿಗಳ ಒಕ್ಕೊರಲ ಆಗ್ರಹವಾಗಿದೆ. ಈ ರೀತಿ ಮನವಿ ಕೊಡಲು ಕಾರ್ಯಕರ್ತರು ಇಂಜಿನಿಯರಿಂಗ್ ಕಾಲೇಜ್ ಗೆ ಹೋದಾಗ ಅಲ್ಲಿ ಸರಿಯಾದ ರೆಸ್ಪಾನ್ಸ್ ಸಿಗದೆ ನಾವು ನೇರವಾಗಿ ತಹಶೀಲ್ದಾರ್ ಕಚೇರಿಗೆ ಹೋಗಿ ಅಲ್ಲಿ ತಹಶೀಲ್ದಾರನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಲಾಯಿತು.
ಹಾಗೂ ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಇದರ ವಿರುದ್ಧ ಕಾಲೇಜಿನಲ್ಲಿ ಉಗ್ರ ಹೋರಾಟವನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ನಡೆಸಲಾಗುವುದು ಎಂದು ಎಚ್ಚರಿಕೆಯ ಸಂದೇಶ ನೀಡಲಾಯಿತು.