Sunday, January 19, 2025
ಪುತ್ತೂರುಸುದ್ದಿ

ಇಂದು ಜು.29 ರೋಟರಿ ಕ್ಲಬ್ ಪುತ್ತೂರು ಯುವ ಪದಗ್ರಹಣ ; ಅಧ್ಯಕ್ಷರಾಗಿ ಡಾ|ಹರ್ಷಕುಮಾರ್ ರೈ, ಕಾರ್ಯದರ್ಶಿಗಳಾಗಿ ಉಮೇಶ್ ನಾಯಕ್ ಕೋಶಾಧಿಕಾರಿಯಾಗಿ ಕುಸುಮ್‌ರಾಜ್ ಅಧಿಕಾರ ಸ್ವೀಕಾರ – ಕಹಳೆ ನ್ಯೂಸ್

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಯುವ ಇದರ 2020-21ನೇ ಸಾಲಿನ ನೂತನ ಅಧ್ಯಕ್ಷರಾಗಿ ಡಾ|ಹರ್ಷ ಕುಮಾರ್ ರೈ ಮಾಡಾವು, ಕಾರ್ಯದರ್ಶಿಯಾಗಿ ಉಮೇಶ್ ನಾಯಕ್ ಮತ್ತು ಕೋಶಾಧಿಕಾರಿಯಾಗಿ ಕುಸುಮ್‌ರಾಜ್ ಆಯ್ಕೆಯಾಗಿದ್ದಾರೆ.

ಪದಗ್ರಹಣ ಸಮಾರಂಭ ಇಂದು ( ಜು.29 ) ಸಂಜೆ ಪುತ್ತೂರು ರೋಟರಿ ಮನೀಷಾ ಹಾಲ್‌ನಲ್ಲಿ ನಡೆಯಲಿದೆ. ರೋಟರಿ ಅಂತರರಾಷ್ಟ್ರೀಯ ಸಂಸ್ಥೆಯ ಗೌರವ ಪುರಸ್ಕೃತ ವಿಶ್ವಾಸ್ ಶೆಣೈಯವರು ಪದಗ್ರಹಣ ನಡೆಸಿಕೊಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ರೋಟರಿ ಅಸಿಸ್ಟೆಂಟ್ ಗವರ್ನರ್ ರತ್ನಾಕರ ರೈ, ಝೋನಲ್ ಲೆಫ್ಟಿನೆಂಟ್ ಜಗಜೀವನ್‌ದಾಸ್ ರೈ, ರೋಟರಿ ಪುತ್ತೂರು ಈಸ್ಟ್ ನ ಅಧ್ಯಕ್ಷ ಕೃಷ್ಣನಾರಾಯಣ ಮುಳಿಯ ಭಾಗವಹಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನೂತನ ಪದಾಧಿಕಾರಿ ಗಳಾಗಿ ಕ್ಲಬ್ ಸರ್ವೀಸ್ ಡೈರೆಕ್ಟರ್ ಮತ್ತು ನಿಯೋಜಿತ ಅಧ್ಯಕ್ಷರಾಗಿ ಭರತ್ ಪೈ, ಕಮ್ಯುನಿಟಿ ಸರ್ವೀಸ್ ಡೈರೆಕ್ಟರ್ ಆಗಿ ದೀಕ್ಷಿತ್ ಹೆಗ್ಡೆ, ಒಕೇಶನಲ್ ಸರ್ವೀಸ್ ಡೈರೆಕ್ಟರ್ ಆಗಿ ಸಚಿನ್ ನಾಯಕ್, ಇಂಟರ್‌ನ್ಯಾಷನಲ್ ಸರ್ವೀಸ್ ಡೈರೆಕ್ಟರ್ ಆಗಿ ದೀಕ್ಷಾ ಸಹಜ್ ರೈ, ಯೂತ್ ಸರ್ವೀಸ್ ಡೈರೆಕ್ಟರ್ ಆಗಿ ನಿಹಾಲ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಕ್ಲಬ್‌ನ ಪೊಲಿಯೋ ಚೆರ್‌ಮೆನ್ ಆಗಿ ಶರತ್ ಎಸ್. ಟಿಆರ್‌ಎಫ್ ಚೇರ್‌ಮೆನ್ ಆಗಿ ಚೇತನ್ ಪ್ರಕಾಶ್ ಕಜೆ, ಮೆಂಬರ್‌ಶಿಪ್ ಚೆರ್‌ಮೆನ್ ಆಗಿ ಅಭೀಶ್ ಕೆ, ಸಿಎಲ್‌ಸಿಸಿ ಚೇರ್‌ಮೆನ್ ಆಗಿ ದೇವಿಚರಣ್ ರೈ, ವಿನ್ಸ್‌ಚೆರ್‌ಮೆನ್ ಆಗಿ ಸೌಮ್ಯ ಎಂ.ಯು, ವಾಟರ್ ಸ್ಯಾನಿಟೈಸರ್ ಚೆರ್‌ಮೆನ್ ಆಗಿ ನರಸಿಂಹ ಪೈ, ಜಿಲ್ಲಾ ಯೋಜನ ಚೆರ್‌ಮೆನ್ ಆಗಿ ಪಶುಪತಿ ಶರ್ಮ, ದಂಡಾಧಿಕಾರಿಯಾಗಿ ವಿನಿತ್ ಶೆಣೈ ಆಯ್ಕೆಯಾಗಿದ್ದಾರೆ. ಸದಸ್ಯರುಗಳಾಗಿ ಅಶ್ವಿನಿಕೃಷ್ಣ ಮುಳಿಯ, ಸತೀಶ್ ರೈ ಕಟ್ಟಾವು, ಸೂರಜ್ ಶೆಟ್ಟಿ, ಪ್ರಕಾಶ್ ಬಿ.ಟಿ, ಸ್ವಸ್ತಿಕಾ ಶೆಟ್ಟಿ, ಸುಧನ್ವ ಆಚಾರ್ಯ, ಕನಿಷ್ಠಾಚಂದ್ರ, ರಾಜೇಶ್ವರಿ ಆಚಾರ್, ನಾಗೇಂದ್ರ ಕಾಮತ್, ಸುದರ್ಶನ್ ರೈ, ವಿಶಾಲ್ ಶೋಭಿತ್, ಹರಿಪ್ರಸಾದ್ ಶೆಟ್ಟಿ, ಎಲ್ಯಾಸ್ ಪಿಂಟೋ, ನಿರೀಕ್ಷಿತ್ ರೈ ಸದಸ್ಯರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೋವಿಡ್-೧೯ ನಿಯಮ ಪಾಲನೆ ಹಿನ್ನೆಲೆಯಲ್ಲಿ ಕ್ಲಬ್‌ನ ಸದಸ್ಯರಿಗೆ ಮಾತ್ರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಲಿದ್ದು 50 ಜನರಿಗೆ ಸೀಮಿತವಾಗಿ ಈ ಕಾರ್ಯಕ್ರಮ ನಡೆಯಲಿದೆ.