Tuesday, April 1, 2025
ದಕ್ಷಿಣ ಕನ್ನಡರಾಜಕೀಯರಾಜ್ಯ

” ಯಾವುದೇ ಆರೋಪಿಗಳನ್ನು ರಕ್ಷಣೆ ಮಾಡಲು ಇದು ಖಾದರ್ ಕಾಲವಲ್ಲ ” ; ಶಾಸಕ ಯು.ಟಿ ಖಾದರ್ ಗೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ತಿರುಗೇಟು – ಕಹಳೆ ನ್ಯೂಸ್

ಮಂಗಳೂರು, ಜು 29 : “ಜಿಲ್ಲೆಯಲ್ಲಿ ಈಗಿರುವುದು ಖಾದರ್ ಕಾಲ ಅಲ್ಲ” ಎನ್ನುವುದು ಶಾಸಕ ಯು.ಟಿ ಖಾದರ್ ಅವರಿಗೆ ನೆನಪಿರಲಿ” ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಶಾಸಕ ಖಾದರ್ ಅವರಿಗೆ ತಿರುಗೇಟು ನೀಡಿದ್ದಾರೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

“ಯು.ಟಿ ಖಾದರ್ ಅವರು ಸಚಿವರಾಗಿದ್ದ ಕಾಲದಲ್ಲಿ ದ.ಕ ಜಿಲ್ಲೆಯಲ್ಲಿ ಪೊಲೀಸರಿಗೆ ಬೆದರಿಕೆ , ಹಲ್ಲೆ, ಗೂಂಡಾಗಿರಿ ಯಥೇಚ್ಚವಾಗಿ ನಡೆಯುತ್ತಿತ್ತು. ಆದರೆ ಈಗ ಇರುವುದು ಖಾದರ್ ಕಾಲ ಅಲ್ಲ ಎನ್ನುವುದು ಶಾಸಕ ಅವರಿಗೆ ನೆನಪಿರಲಿ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ”.

ಜಾಹೀರಾತು
ಜಾಹೀರಾತು
ಜಾಹೀರಾತು

ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಅವರ ವರ್ಗಾವಣೆ ಬಗ್ಗೆ ಶಾಸಕ ಖಾದರ್ ಟ್ವೀಟ್ ಮೂಲಕ , ” ಕಾನೂನು ಕೈಗೆತ್ತಿಕೊಂಡರೆ, ನೈತಿಕ‌ ಪೋಲಿಸ್ ಗಿರಿ ಮಾಡಿದ್ರೆ ಕ್ರಮ ಕೈಗೊಳ್ಳತ್ತೇನೆ ಎಂದಿದ್ದಕ್ಕೆ ದುಷ್ಕರ್ಮಿಗಳು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ರವರಿಗೆ ಕೊಲೆ ಬೆದರಿಕೆ ಹಾಕಿದರು.ಸರ್ಕಾರ ಕೊಲೆ ಬೆದರಿಕೆ‌ ಹಾಕಿದವರಿಗೆ ಶಿಕ್ಷೆ ನೀಡುವ ಬದಲು ಜಿಲ್ಲಾಧಿಕಾರಿಗಳಿಗೆ ಶಿಕ್ಷೆ ನೀಡಿದೆ” ಎಂದು ಆರೋಪಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ” ಕಾಲ ಕಾಲಕ್ಕೆ ರಾಜ್ಯ ಸರ್ಕಾರ ಮಾಡುವ ಸ್ವಾಭಾವಿಕ ವರ್ಗಾವಣೆ ಅಡಿ, ದ.ಕ ಜಿಲ್ಲಾಧಿಕಾರಿಯವರ ವರ್ಗಾವಣೆಯಾಗಿದೆ. ಆದರೆ ವರ್ಗಾವಣೆ ಬಗ್ಗೆ ರಾಜಕೀಯ ಲೇಪ ಬಳಸಿ ಶಾಸಕ ಯು.ಟಿ ಖಾದರ್ ಅವರು ಜಿಲ್ಲಾಧಿಕಾರಿಯವರ ವರ್ಗಾವಣೆಯ ಹಿಂದೆ ರಾಜಕಾರಣ ಇದೆ ಎನ್ನುವ ಅಪಾದನೆ ಮಾಡಿದ್ದಾರೆ. ಆದರೆ ಸ್ವಾಭಾವಿಕವಾಗಿ ರಾಜ್ಯ ಸರ್ಕಾರ ಆಡಳಿತಾತ್ಮಕ ವರ್ಗಾವಣೆ ಇದಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

“ಜಿಲ್ಲಾಧಿಕಾರಿಯವರಿಗೆ ಜೀವ ಬೆದರಿಕೆ ಹಾಕಿರುವವರ ಮೇಲೆ ಕ್ರಮ ಕೈಗೊಂಡಿಲ್ಲ ಎನ್ನುವ ಆರೋಪವನ್ನು ಖಾದರ್ ಅವರು ಮಾಡಿದ್ದು, ಆದರೆ ಈ ಮಾತುಗಳನ್ನು ವಾಪಾಸು ಪಡೆದುಕೊಳ್ಳಲಿ. ಯಾರು ಬೆದರಿಕೆ ಹಾಕಿದ್ದಾರೆ ಅವರ ಮೇಲೆ ಈಗಾಗಲೇ ರಾಜ್ಯ ಗೃಹ ಇಲಾಖೆ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ” ಎಂದು ಹೇಳಿದ್ದಾರೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ