Recent Posts

Thursday, November 21, 2024
ಕ್ರೈಮ್ಬೆಂಗಳೂರುರಾಜ್ಯ

ಅಶ್ಲೀಲ ವೆಬ್‍ಸೈಟ್‍ನಲ್ಲಿ ಬೆಂಗ್ಳೂರಿನ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿಯರ ಅಶ್ಲೀಲ ದೇಹದ ಫೋಟೋಗಳನ್ನು ಎಡಿಟ್ ಮಾಡಿ ಅಪ್ಲೋಡ್ – ಕಹಳೆ ನ್ಯೂಸ್

ಬೆಂಗಳೂರು: ನಗರದ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿನಿಯರಿಗೆ ಫೋಟೋಗಳ ದುರ್ಬಳಕೆ ಆತಂಕ ಮನೆ ಮಾಡಿದೆ. ವಿದ್ಯಾರ್ಥಿನಿಯರಿಗೆ ಗೊತ್ತಾಗದಂತೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ ಕದ್ದು ಅಶ್ಲೀಲ ವೆಬ್‍ಸೈಟ್‍ಗಳಲ್ಲಿ ಅಪ್ಲೋಡ್ ಮಾಡಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವಿದ್ಯಾರ್ಥಿಗಳು ಅಪ್ಲೋಡ್ ಮಾಡಿದ್ದ ಫೋಟೋಗಳನ್ನು ಕದ್ದು ಕೃತ್ಯ ಎಸಲಾಗಿದೆ. ನಕಲಿ ಖಾತೆ ಸೃಷ್ಟಿಸಿ ಫೇಸ್‍ಬುಕ್ ಹಾಗೂ ಇನ್ಸ್ ಸ್ಟಾದಲ್ಲಿ ವಿದ್ಯಾರ್ಥಿನಿಯರಿಗೆ ರಿಕ್ವೆಸ್ಟ್ ಕಳಿಸಿ ಬಳಿಕ ಫೋಟೋಗನ್ನು ಶೇರ್ ಮಾಡಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಘಟನೆ ಕುರಿತು ಬೆಂಗಳೂರಿನ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ತನಿಖೆ ಮುಂದುವರಿಸಿದ್ದಾರೆ. ಅಶ್ಲೀಲ ಜಾಲತಾಣದಲ್ಲಿ ಫೋಟೋ ಅಪ್ಲೋಡ್ ಮಾಡಿರುವುದರಿಂದ ವಿದ್ಯಾರ್ಥಿನಿಯರು ಆತಂಕಕ್ಕೊಳಗಾಗಿದ್ದಾರೆ.

ಕಾಲೇಜಿನ ಹಲವು ವಿದ್ಯಾರ್ಥಿನಿಯರು ಮಾತ್ರವಲ್ಲದೇ ಮಹಿಳಾ ಭೋದಕ ಸಿಬ್ಬಂದಿಯ ಫೋಟೋಗಳನ್ನು ಕದ್ದು ಅಪ್ಲೋಡ್ ಮಾಡಲಾಗಿದೆ. ಸದ್ಯ ನಗರದ ಒಂದು ಕಾಲೇಜು ಮಾತ್ರವಲ್ಲದೇ ಹಲವು ಕಾಲೇಜು ವಿದ್ಯಾರ್ಥಿನಿಯರ ಫೋಟೋಗಳನ್ನು ಇದೇ ರೀತಿ ಕದ್ದು ಬಳಕೆ ಮಾಡಿಕೊಂಡಿರುವ ಅನುಮಾನ ವ್ಯಕ್ತವಾಗಿದೆ.

 

ಈ ಹಿಂದೆ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು, ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರು, ವಿದ್ಯಾರ್ಥಿನಿಯರು ಹೆಚ್ಚು ಫೋಟೋ ಅಪ್ಲೋಡ್ ಮಾಡದಂತೆ ಮನವಿ ಮಾಡಿದ್ದರು. ಇದರ ನಡುವೆಯೇ ವಿದ್ಯಾರ್ಥಿನಿಯರ ಫೋಟೋವನ್ನು ಕದ್ದು ದುರ್ಬಳಕೆ ಮಾಡಿಕೊಳ್ಳಲಾಗಿದೆ.

ವಿದ್ಯಾರ್ಥಿನಿಯರ ಫೋಟೋಗೆ ಅಶ್ಲೀಲ ದೇಹದ ಫೋಟೋಗಳನ್ನು ಎಡಿಟ್ ಮಾಡಿ ಅಪ್ಲೋಡ್ ಮಾಡಲಾಗಿದೆ. ಕಾಲೇಜಿನ ಪ್ರಾಂಶುಪಾಲರು ಹಾಗೂ ಎಚ್‍ಒಡಿ ಅವರು ಕೂಡ ಈ ಕುರಿತಂತೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆಗೆ ಸಂಬಂಧಿದಂತೆ ಇಬ್ಬರನ್ನು ಈಗಾಗಲೇ ಬಂಧಿಸಲಾಗಿದೆ ಎಂಬ ಮಾಹಿತಿ ಲಭಿಸಿದೆ.