Sunday, January 19, 2025
ಕ್ರೀಡೆಸುದ್ದಿ

ಐಸಿಸಿ ಏಕದಿನ ರ‍್ಯಾಕಿಂಗ್ : ಬ್ಯಾಟಿಂಗ್ ವಿಭಾಗದಲ್ಲಿ ಅಗ್ರಸ್ಥಾನಗಳನ್ನು ಕಾಯ್ದುಕೊಂಡ ಕೊಹ್ಲಿ,ರೋಹಿತ್ – ಕಹಳೆ ನ್ಯೂಸ್

ನವದೆಹಲಿ: ಐಸಿಸಿ ಏಕದಿನ ರ‍್ಯಾಕಿಂಗ್ ಪಟ್ಟಿ ಪ್ರಕಟವಾಗಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪ ನಾಯಕ ರೋಹಿತ್ ಶರ್ಮಾ ಕ್ರಮವಾಗಿ ನಂಬರ್1 ಹಾಗೂ ನಂಬರ್ 2 ಸ್ಥಾನಗಳನ್ನು  ಕಾಯ್ದುಕೊಂಡಿದ್ದಾರೆ.

ಮಂಗಳವಾರ ಬಿಡುಗಡೆಯಾದ ರ‍್ಯಾಕಿಂಗ್ ಪಟ್ಟಿಯಲ್ಲಿ ವೇಗಿ  ಜಸ್ಪ್ರೀತ್ ಬೂಮ್ರಾ ಬೌಲರ್ ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಉಳಿದುಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

871 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಕೊಹ್ಲಿ ಅಗ್ರಸ್ಥಾನದಲ್ಲಿದ್ದರೆ 855 ಅಂಕಗಳೊಂದಿಗೆ ರೋಹಿತ್ ಎರಡನೇ ಸ್ಥಾನ, 829 ಅಂಕಗಳೊಂದಿಗೆ ಪಾಕಿಸ್ತಾನದ ಬಾಬರ್ ಅಜಂ ಮೂರನೇ ಸ್ಥಾನದಲ್ಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬೌಲರ್ ವಿಭಾಗದಲ್ಲಿ 722 ಅಂಕಗಳೊಂದಿಗೆ ನ್ಯೂಜಿಲೆಂಡ್ ವೇಗಿ ಟ್ರೆಂಟ್ ಬೌಲ್ಟ್ ಅಗ್ರಸ್ಥಾನದಲ್ಲಿದ್ದರೆ, 719 ಅಂಕಗಳೊಂದಿಗೆ ಭಾರತದ ಜಸ್ಪ್ರೀತ್ ಬೂಮ್ರಾ ಎರಡನೇ ಸ್ಥಾನದಲ್ಲಿದ್ದಾರೆ. 701 ಅಂಕಗಳೊಂದಿಗೆ ಅಪ್ಘಾನಿಸ್ತಾದ ಮುಜಿಬ್ ಉರ್ ರೆಹಮಾನ್
ಮೂರನೇ ಸ್ಥಾನದಲ್ಲಿದ್ದಾರೆ.

ಟಾಪ್ 10 ಅಲ್ ರೌಂಡರ್ ಗಳ ಪಟ್ಟೆಯಲ್ಲಿ ಭಾರತದ ರವೀಂದ್ರ ಜಡೇಜಾ 8ನೇ ಸ್ಥಾನದಲ್ಲಿದ್ದಾರೆ. ಈ ವಿಭಾಗದಲ್ಲಿ ಅಪ್ಘಾನಿಸ್ತಾನದ ಮೊಹಮ್ಮದ್ ನಬಿ ಪ್ರಥಮ ಸ್ಥಾನದಲ್ಲಿದ್ದರೆ ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.