Wednesday, January 22, 2025
ಸಿನಿಮಾ

ಝುಳು ಝುಳು ಝರಿಯಲ್ಲಿ ಮಿಲ್ಕಿ ಬ್ಯೂಟಿಗೆ ಜಳಕದ ಪುಳಕ ; ಫೋಟೋ ಹಂಚಿಕೊಂಡು ಪಡ್ಡೆ ಹುಡುಗರ ನಿದ್ದೆಗೆಡಿಸಿದ ತಮನ್ನಾ – ಕಹಳೆ ನ್ಯೂಸ್

ಹೈದರಾಬಾದ್: ಟಾಲಿವುಡ್ ಅಂಗಳದ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಫೋಟೋವೊಂದು ಪಡ್ಡೆ ಹುಡುಗರ ನಿದ್ದೆಗೆಡಿಸಿದೆ.

ಇನ್‍ಸ್ಟಾಗ್ರಾಂನಲ್ಲಿ ಝರಿಯಲ್ಲಿ ನೀರಿನ ಜೊತೆ ಆಟವಾಡುತ್ತಿರುವ ಫೋಟೋ ಹಂಚಿಕೊಂಡಿರುವವ ತಮನ್ನಾ, ಕೆಲವೊಮ್ಮೆ ಇದ್ದಕ್ಕಿದಂತೆ ಮನುಷ್ಯ ಯಾರೂ ತಲುಪದ ಸ್ಥಳಗಳ ಹುಡುಕಾಟದಲ್ಲಿ ತೊಡಗಿಕೊಳ್ಳುತ್ತಾನೆ. ಕೊನೆಗೆ ವೈಫೈ ಸಂಪರ್ಕವಿಲ್ಲದ ಪ್ರಕೃತಿ ಜೊತೆ ಬೆರಯುತ್ತಾನೆ. ನಿಸರ್ಗದ ಜೊತೆ ಸ್ನೇಹ ಬೆಳೆಸುವದರಿಂದ ಬಹಳ ಲಾಭಗಳಿದ್ದು, ಇಲ್ಲಿ ಎಲ್ಲವೂ ಸ್ವಾರ್ಥಕ್ಕೂ ಮೀರಿದ್ದಾಗಿದೆ. ನೀವು ಪ್ರಕೃತಿಗೆ ಶರಣಾದ್ರೆ ನಿಮ್ಮೆಲ್ಲ ಅಗತ್ಯಗಳನ್ನು ಪೂರ್ಣಗೊಳಿಸುತ್ತದೆ. ಇಂದು ವಿಶ್ವ ಪ್ರಕೃತಿ ಸಂರಕ್ಷಣಾ ದಿನದಂದು ನಮ್ಮನ್ನು ಕಾಪಾಡಿಕೊಳ್ಳುವುದರ ಜೊತೆಗೆ ನಿಸರ್ಗವನ್ನು ಉಳಿಸಿಕೊಳ್ಳಲು ಪ್ರತಿಜ್ಞೆ ಮಾಡೋಣ ಎಂದು ಬರೆದುಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನವಾಜುದ್ದೀನ್ ಸಿದ್ಧಿಕಿ ಜೊತೆ ‘ಬೋಲೇ ಚುಡಿಯಾಂ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದುವರೆಗೂ ಮೂರು ಭಾಷೆಗಳಲ್ಲಿ 50ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೊರೊನಾದಿಂದಾಗಿ ಸಿನಿಮಾ ಸ್ಥಗಿತಗೊಂಡಿದ್ದರಿಂದ ತಮನ್ನಾ ಮನೆಯಲ್ಲಿ ಕ್ವಾಲಿಟಿ ಟೈಂ ಕಳೆಯುತ್ತಿದ್ದಾರೆ. ಲಾಕ್‍ಡೌನ್ ಸಮಯದಲ್ಲಿ ಸಿಂಧಿಯಾ ಭಾಷೆ ಕಲಿಯತ್ತಿರೋದಾಗಿ ಈ ಹಿಂದೆ ತಮನ್ನಾ ಪೋಸ್ಟ್ ಮಾಡಿದ್ದರು.