Breaking News : ಸತತ ಬಿಕ್ಕಳಿಕೆಯೂ ” ಕೋವಿಡ್-19 ” ಕೊರೊನಾ ವೈರಸ್‍ನ ಹೊಸ ರೋಗ ಲಕ್ಷಣ ; ನಿರ್ಲಕ್ಷಿಸಬೇಡಿ, ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಿರಿ ಎಂದು ಸಂಶೋಧಕರು – ಕಹಳೆ ನ್ಯೂಸ್
ನವದೆಹಲಿ, ಜು 29 : ನೆಗಡಿ, ಕೆಮ್ಮು, ಗಂಟಲು ನೋವು, ಜ್ವರ, ಮೈ-ಕೈ ನೋವು, ರುಚಿ ಕಳೆದುಕೊಳ್ಳುವುದು ಮತ್ತು ಉಸಿರಾಟ ತೊಂದರೆ ಇವೆಲ್ಲವೂ ಕೊವೀಡ್ -19 ವೈರಸ್ ನ ಸಾಮಾನ್ಯ ರೋಗ ಲಕ್ಷಣಗಳು. ಆದರೆ ಇದೀಗ ಕೊರೊನಾ ರೋಗ ಲಕ್ಷಣಗಳು ರೂಪಾಂತರವಾಗುತ್ತಿದ್ದು, ಯಾವುದೇ ರೋಗ ಲಕ್ಷಣ ರಹಿತರಲ್ಲೂ ಕೊವೀಡ್ ಸೋಂಕು ಕಂಡುಬರುತ್ತಿದೆ.
ಇವೆಲ್ಲದರ ನಡುವೆ ಮಾಹಾಮಾರಿಯ ಹೊಸ ರೋಗಲಕ್ಷಣವೊಂದನ್ನು ತಜ್ಞ ವೈದ್ಯರು ಪತ್ತೆ ಮಾಡಲಾಗಿದ್ದು, ‘ಸತತ ಬಿಕ್ಕಳಿಕೆ ‘ಯೂ ಕೋವಿಡ್-19 ವೈರಸ್‍ನ ರೋಗ ಲಕ್ಷಣ ಎಂದಿದ್ದಾರೆ. ನಿರಂತರವಾಗಿ ಬಿಕ್ಕಳಿಕೆ ಕಾಡುತ್ತಿದ್ದರೆ ಇದ್ದರೆ ಅದನ್ನು ನಿರ್ಲಕ್ಷಿಸಬೇಡಿ. ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಿರಿ ಎಂದು ಸಂಶೋಧಕರು ತಿಳಿಸಿದ್ದಾರೆ.
ಮೊತ್ತ ಮೊದಲ ಬಾರಿಗೆ, 62 ವರ್ಷದ ವ್ಯಕ್ತಿಯೋರ್ವ ತಮ್ಮ ತೂಕವನ್ನು ಏಕಾಏಕಿ ಗಣನೀಯವಾಗಿ ಕಳೆದುಕೊಂಡು ಹಾಗೂ ನಿರಂತರ ಬಿಕ್ಕಳಿಸುವಿಕೆ ಸಮಸ್ಯೆಯಿಂದ ಚಿಕಿತ್ಸೆಗಾಗಿ ಬಂದಿದ್ದರು. ಮಧುಮೇಹ, ರಕ್ತದೊತ್ತಡ ಹೊರತುಪಡಿಸಿ, ಬೇರೆ ಯಾವ ರೋಗಲಕ್ಷಣಗಳು ಅವರಲ್ಲಿ ಕಂಡುಬಂದಿರಲಿಲ್ಲ. ಕ್ಯಾನ್ಸರ್ ಆಗಲಿ, ಧೂಮಪಾನ ಅಭ್ಯಾಸವಾಗಲಿ, ಉಸಿರಾಟದ ಸಮಸ್ಯೆ, ಪ್ರಯಾಣದ ಇತಿಹಾಸ, ಸಂಪರ್ಕ ಇತಿಹಾಸ ಯಾವುದು ಅವರಲ್ಲಿ ಇರಲಿಲ್ಲ. ಈ ರೋಗಿಯನ್ನು ಬಗ್ಗೆ ಅಧ್ಯಯನ ನಡೆಸಿದಾಗ ಕೊರೊನಾ ರೋಗ ಲಕ್ಷಣಗಳಲ್ಲಿ ಬಿಕ್ಕಳಿಕೆಯೂ ಒಂದು ಎಂದು ಸಂಶೋಧಕರ ಅರಿವಿಗೆ ಬಂದಿತ್ತು. ಈ ಬಗ್ಗೆ ಮತ್ತಷ್ಟು ಸೋಂಕಿತ ರೋಗಿಗಳ ಮಾಹಿತಿ ಕಲೆ ಹಾಕಿ ಕೂಲಂಕುಷವಾಗಿ ಅಧ್ಯಯನ ನಡೆಸಿದಾಗ ಕೋವಿಡ್-19 ವೈರಸ್‍ನ ರೋಗ ಲಕ್ಷಣಗಳಲ್ಲಿ ಸತತ ಬಿಕ್ಕಳಿಕೆಯೂ ಒಂದು ಎನ್ನುವುದು ಬಹಿರಂಗವಾಗಿದೆ.
ಹೀಗಾಗಿ ಕೊರೊನಾ ಹೆಮ್ಮಾರಿ ಈಗ ಬಿಕ್ಕಳಿಕೆ ಸ್ವರೂಪದಲ್ಲಿ ಜನರಿಗೆ ಕಾಟ ಕೊಡಲಾರಂಭಿಸಿದೆ. ಯಾರಿಗೆ ಆಗಲಿ ದೀರ್ಘಕಾಲದ ಬಿಕ್ಕಳಿಕೆ ಇದ್ದರೆ ಅದನ್ನು ನಿರ್ಲಕ್ಷಿಸಬೇಡಿ. ತನ್ನ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಿರಿ ಎಂದು ಸಂಶೋಧಕರು ತಿಳಿಸಿದ್ದಾರೆ.